ಹೇಗಿದೆ ನೋಡಿ ಕಾಂತಾರ ನಾಯಕನ ಫ್ಯಾಮಿಲಿ ಪೋಟೋ ಶೂಟ್..!
ಕಾಂತಾರ ನಾಯಕ ರಿಷಬ್ ಶೆಟ್ಟಿ ಇದೀಗ ಫ್ಯಾಮಿಲಿ ಜೊತೆ ಮಸ್ತ್ ಪೋಟೋ ಶೂಟ್ ಮಾಡಿಸಿದ್ದು, ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಶೇರ್ ಮಾಡಿರುವ ಪೋಟೋಗಳಲ್ಲಿ ನಟ ಹಾಗೂ ಅವರ ಮಗ ಒಂದೇ ಕಲರ್ ಬಟ್ಟೆಯನ್ನು ತೊಟ್ಟರೆ ರಿಷಬ್ ಅವರ ಪತ್ನಿ ಹಾಗೂ ಮಗಳು ಒಂದೇ ಕಲರ್ ಬಟ್ಟೆತೊಟ್ಟು ಹಚ್ಚಹಸಿರಿನಲ್ಲಿ ಪೋಟೋಶೂಟ್ ಮಾಡಿಸಿದ್ದಾರೆ.
ರಿಷಬ್ ಶೆಟ್ಟಿಯವರು ಕಾಂತಾರ ಸಿನಿಮಾ ಮೂಲಕ ಭರ್ಜರಿಯಾಗಿ ಯಶಸ್ಸು ಗಳಿಸಿದರು. ಅಲ್ಲದೇ ಈ ಸಿನಿಮಾ ಅಪಾರವಾದ ಅಭಿಮಾನಿ ಬಳಗವನ್ನೇ ಹುಟ್ಟು ಹಾಕಿತು.
ಇದೀಗ ನಟ ರಿಷಬ್ ಶೆಟ್ಟಿ ಅವರು ಎಲ್ಲರ ಮನೆಮಾತಾಗಿದ್ದಾರೆ. ಜೊತೆಗೆ ಅವರ ಅಭಿಮಾನಿಗಳು ಕಾಂತಾರ 2 ಚಿತ್ರಕ್ಕೆ ಕಾಯುತ್ತಿದ್ದಾರೆ.