ಈ ಕ್ರಿಕೆಟಿಗ ತನ್ನ 16 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ! ಈತ ಟೀಂ ಇಂಡಿಯಾದವನೇ... ಯಾರೆಂದು ಗೆಸ್ ಮಾಡಿ ನೋಡೋಣ
ಆ ಕ್ರಿಕೆಟಿಗನೊಬ್ಬ ತನ್ನ ಸಂಪೂರ್ಣ 16 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ. ಅಂದಹಾಗೆ ಆತ ಭಾರತೀಯನೇ... ಅಷ್ಟೇ ಅಲ್ಲದೆ, ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾದ ಹೆಸರು ಅಚ್ಚಳಿಯದೆ ನೆಲೆಯೂರುವಂತೆ ಮಾಡಿದ ಶ್ರೇಯ ಕೂಡ ಈ ದಿಗ್ಗಜನಿಗೇ ಸೇರಬೇಕು... ಅಷ್ಟಕ್ಕೂ ಆತ ಯಾರೆಂದು ನಿಮಗೆ ತಿಳಿದಿದೆಯೇ?
ಕ್ರಿಕೆಟ್ʼನಲ್ಲಿ ಕ್ಯಾಚ್, ಬೌಲ್ಡ್, ಎಲ್‌ಬಿಡಬ್ಲ್ಯೂ, ಸ್ಟಂಪ್ಡ್, ಹಿಟ್ ವಿಕೆಟ್, ಟೈಮ್ ಔಟ್, ಬಾಲ್ ಹ್ಯಾಂಡಲ್, ಫೀಲ್ಡ್'ಗೆ ಅಡ್ಡಿಪಡಿಸುವುದು ಹೀಗೆ ಸುಮಾರು 11 ಬಗೆಯಲ್ಲಿ ಔಟ್ ಆಗುವ ರೀತಿ ಇದೆ. ಅದರಲ್ಲಿ ಒಂದು ರನೌಟ್. ಸಾಮಾನ್ಯವಾಗಿ ರನ್ ಕದಿಯಲು ಓಡುವ ದಾಂಡಿಗ, ಕ್ರೀಸ್ ಲೈನ್ ತಲುಪುವ ಮುನ್ನವೇ ಬಾಲ್ ವಿಕೆಟ್ʼಗೆ ಬಡಿದು ಔಟ್ ಆಗುವ ವಿಧಾನ.
ಆದರೆ ಭಾರತದ ಆ ಒಬ್ಬ ಕ್ರಿಕೆಟಿಗ, ತನ್ನ 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ. ಆತ ಯಾರು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.
ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತೀಯ ಕ್ರಿಕೆಟಿಗ ಕಪಿಲ್ ದೇವ್. 1983ರ ವಿಶ್ವಕಪ್ʼನಲ್ಲಿ ಭಾರತವನ್ನು ಗೆಲ್ಲುವಂತೆ ಮಾಡಿದ ನಾಯಕ. ಇವರು ತಮ್ಮ 16 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಒಂದು ಬಾರಿಯೂ ರನ್ ಔಟ್ ಆಗಿರಲಿಲ್ಲ.
ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ʼನಲ್ಲಿ ಕಪಿಲ್ 687 ವಿಕೆಟ್ʼಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಜೊತೆಗೆ 9031 ರನ್ ಗಳಿಸಿದ್ದ ಕಪಿಲ್ ದೇವ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್ ರೌಂಡರ್ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಭಾರತದ ಮಾಜಿ ನಾಯಕ ಕಪಿಲ್ ದೇವ್ ಅದ್ಭುತ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್ ಎರಡರಲ್ಲೂ ಪ್ರವೀಣರಾಗಿದ್ದರು. 1978 ರಲ್ಲಿ ಭಾರತದ ಪರ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ಕಪಿಲ್ ದೇವ್, 1994 ರಲ್ಲಿ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದರು. ಭಾರತಕ್ಕಾಗಿ 131 ಟೆಸ್ಟ್ ಮತ್ತು 225 ODI ಪಂದ್ಯಗಳನ್ನು ಆಡಿರುವ ಕಪಿಲ್, ಕ್ರಮವಾಗಿ 5248 ಮತ್ತು 3783 ರನ್ ಗಳಿಸಿದ್ದಾರೆ.
ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ʼನಲ್ಲಿ 434 ಮತ್ತು ಏಕದಿನ ಕ್ರಿಕೆಟ್ʼನಲ್ಲಿ 253 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. 1983 ರ ವಿಶ್ವಕಪ್ ಸೆಮಿಫೈನಲ್ʼನಲ್ಲಿ, ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಇಂಗ್ಲೆಂಡ್ ಆಲ್‌ರೌಂಡರ್ ಇಯಾನ್ ಬೋಥಮ್ ನಂತರ ಕಪಿಲ್ ದೇವ್ ವಿಶ್ವದ ಎರಡನೇ ಅತ್ಯುತ್ತಮ ಆಲ್‌ರೌಂಡರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.