ಹಳೆ ಪ್ರೀತಿ ಮರೆಯೋಕೆ ಸಾಧ್ಯಾನಾ?.. ಮಾಜಿ ಪ್ರೇಮಿ ಶಾಹಿದ್ ಕಪೂರ್ ಜೊತೆ ಕಾಣಿಸಿಕೊಂಡ ಕರೀನಾ ಕಪೂರ್! ಫ್ಯಾನ್ಸ್ ಫುಲ್ ಖುಷ್..
ನಟ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಈ ಫೋಟೋಗಳು ಮತ್ತು ವೀಡಿಯೊಗಳಿಗೆ ಅಭಿಮಾನಿಗಳಿಂದ ಲೈಕ್‌ಗಳು ಮತ್ತು ಕಾಮೆಂಟ್‌ಗಳು ಹರಿದು ಬರುತ್ತಿವೆ. ಸುಮಾರು ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಬೇರ್ಪಟ್ಟರು.
ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಯಾಗಿದ್ದರು. ಇವರಿಬ್ಬರ ಬ್ರೇಕಪ್ ನಂತರ ಅಭಿಮಾನಿಗಳು ಕೂಡ ತುಂಬಾ ನೊಂದುಕೊಂಡಿದ್ದರು. ಆದರೆ ಈಗ ಹಲವು ವರ್ಷಗಳ ನಂತರ ಶಾಹಿದ್-ಕರೀನಾ ಒಂದೇ ಪ್ರೆಮ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಇಬ್ಬರೂ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಈ ಶಾಲೆಯಲ್ಲಿ ಓದುತ್ತಾರೆ. ಆದ್ದರಿಂದ, ವಾರ್ಷಿಕ ಕಾರ್ಯಕ್ರಮವು ಹಲವಾರು ಸೆಲೆಬ್ರಿಟಿಗಳ ಆಗಮನವನ್ನು ಕಂಡಿತು.
ವಾರ್ಷಿಕ ಸಮಾರಂಭದಲ್ಲಿ, ಶಾಹಿದ್ ಕಪೂರ್ ಕರೀನಾ ಮತ್ತು ಸೈಫ್ ಅಲಿ ಖಾನ್ ಅವರ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಒಂದೇ ಸಾಲಿನಲ್ಲಿ ಕುಳಿತಿದ್ದಾರೆ. ಹೀಗಾಗಿ ಇದೀಗ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕರೀನಾ ಮತ್ತು ಸೈಫ್ ಅವರ ಮಕ್ಕಳಾದ ತೈಮೂರ್ ಮತ್ತು ಜಹಾಂಗೀರ್ ಇಬ್ಬರೂ ಅಂಬಾನಿಯ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಹಿದ್ ಮತ್ತು ಮೀರಾ ಅವರ ಮಕ್ಕಳಾದ ಮಿಶಾ ಮತ್ತು ಜೈನ್ ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಹಾಗಾಗಿ ವಾರ್ಷಿಕ ಕಾರ್ಯಕ್ರಕ್ಕೆ ಈ ಎಲ್ಲಾ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ..
ಶಾಹಿದ್ ಮತ್ತು ಕರೀನಾ 2000 ರಲ್ಲಿ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿ.. ಏಳುವರ್ಷಗಳ ಬಳಿಕ 2007 ರಲ್ಲಿ ಬೇರ್ಪಟ್ಟರು. ಕರೀನಾ ನಂತರ 2012 ರಲ್ಲಿ ಸೈಫ್ ಅವರನ್ನು ವಿವಾಹವಾದರು ಮತ್ತು ಶಾಹಿದ್ 2015 ರಲ್ಲಿ ಮೀರಾ ರಜಪೂತ್ ಅವರನ್ನು ವಿವಾಹವಾದರು.