ಕರೀನಾ ಕಪೂರ್ ಸೈಫ್ ಅಲಿ ಖಾನ್ ವಿಚ್ಛೇದನದ ಸುಳಿವು ಕೊಟ್ಟಬಿಡ್ತಾ ಒಂದೇ ಒಂದು ಪೋಸ್ಟ್ !?
ಸೈಫ್ ಅಲಿ ಖಾನ್ ಸಹೋದರಿ ಸೋಹಾ ಅಲಿ ಖಾನ್ ಅವರ ಇತ್ತೀಚಿನ ಈದ್ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕರೀನಾ ಕಪೂರ್ ಖಾನ್ ಅವರನ್ನು ಈ ಫೋಟೋದಲ್ಲಿ ಕ್ರಾಪ್ ಮಾಡಲಾಗಿದೆ.
ಪೋಸ್ಟ್ನಲ್ಲಿ ಸೋಹಾ ಮೊದಲು ತನ್ನ ಸಹೋದರ ಸೈಫ್ ಅಲಿ ಖಾನ್ ಮತ್ತು ಸಹೋದರಿ ಸಬಾ ಅಲಿ ಖಾನ್ ಜೊತೆಗೆ ಬಾಲಿವುಡ್ ಬೆಬೋ ಕರೀನಾ ಕಪೂರ್ ಇರುವ ಫೋಟೋ ಹಂಚಿಕೊಂಡಿದ್ದಾರೆ.
ಮೂರನೇ ಫೋಟೋದಲ್ಲಿ ಕರೀನಾ ಕಪೂರ್ ಅವರ ಮುಖ ಕ್ರಾಪ್ ಆಗಿದೆ. ಅದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಸೋಹಾ ಫೋಟೋವನ್ನು ಕ್ರಾಪ್ ಮಾಡಿದ್ದಕ್ಕೆ ನೆಟಿಜನ್ಗಳು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಕರೀನಾ ಮತ್ತು ಸೋಹಾ ಅವರ ನಡುವೆ ಸಂಬಂಧ ಹಳಿಸಿದೆಯಾ ಎಂಬ ವಿಚಾರ ಚರ್ಚೆಯಾಗುತ್ತದೆ. ಆದರೆ ಇದು ಬೇಕಂತಲೇ ಮಾಡಿದ್ದಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.
ಆದರೆ ಫ್ಯಾಮಿಲಿ ಫೋಟೋದಿಂದ ಕರೀನಾ ಕ್ರಾಪ್ ಆಗಿರುವುದು ಮಾತ್ರ ತೀವ್ರ ಚರ್ಚೆ ಹುಟ್ಟು ಹಾಕಿದೆ. ಸೈಫ್ ಮತ್ತು ಕರೀನಾ ನಡುವೆ ಅಂತರ ಮೂಡಿದೆಯಾ ಎಂಬ ಪ್ರಶ್ನೆಯನ್ನೂ ಸಹ ಕೆಲವು ಕೇಳುವಂತಾಗಿದೆ.
ಫೋಟೋ ಹಾಕುವಾಗ ಮಿಸ್ ಆಗಿ ಕ್ರಾಪ್ ಆಗಿರಲೂ ಬಹುದು. ಇಷ್ಟಕ್ಕೆ ಕರೀನಾ ಕಪೂರ್ ಸೈಫ್ ಅಲಿ ಖಾನ್ ವಿಚ್ಛೇದನದ ವದಂತಿ ಹಬ್ಬುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಈದ್ ಆಚರಣೆಯಲ್ಲಿ ಬೆಬೋ ಬಿಂದಿಯನ್ನು ಹೇಗೆ ಧರಿಸಿದ್ದು ಸಹ ಎಲ್ಲರ ಗಮನ ಸೆಳೆದಿರುವ ಮತ್ತೊಂದು ವಿಷಯವಾಗಿದೆ.