ಸಾರಾ ಅಲಿ ಖಾನ್‌ಗೆ ವಿಶೇಷ ಗಿಫ್ಟ್ ಕೊಟ್ಟ ಕರೀನಾ ಕಪೂರ್..ಮಲ ಮಗಳೊಂದಿಗೆ ನಟಿಗೆ ಅಳಿಸಲಾಗದ ಬಾಂಧವ್ಯ
ಬಾಲಿವುಡ್‌ನ ಬೆರಗುಗೊಳಿಸುವ ಬ್ಯೂಟಿ ಸಾರಾ ಅಲಿ ಕಾನ್ ನಿನ್ನೆ (ಆಗಸ್ಟ್ 12) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾರಾ ತನ್ನ 29 ನೇ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಸ್ಟಾರ್‌ಗಳು ಹಾಗೂ ಅಭಿಮಾನಿಗಳು ಸಾರಾ ಅಲಿ ಖಾನ್ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಕೇವಲ ಇವರಷ್ಟೆ ಅಲ್ಲ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಕರೀನಾ ಕಪೂರ್ ಕೂಡ ತಮ್ಮ ಮಲ ಮಗಳಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ
ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿಯಾದ ಅಮೃತಾ ಸಿಂಗ್ ಮಗಲು ಸಾರಾ ಅಲಿ ಖಾನ್, ತನ್ನ ಮಲತಾಯಿ ಕರೀನಾ ಕಪೂರ್ ಅವರೊಂದಿಗೆ ಕೂಡ ವಿಶೇಷ ಭಾಂದ್ವಯವನ್ನು ಹೊಂದಿದ್ದಾರೆ.
ಬೆಬೋ ಸಾರಾ ಅವರ ಹುಟ್ಟುಹಬ್ಬದಂದು ಸಾರಾ ಸೈಫ್ ಜೊತೆಯಲ್ಲಿ ನಿಂತು ಪೋಸ್ ಕೊಟ್ಟಿರುವ ಫೋಟೋವನ್ನು ಹಂಚಿಕೊಂಡು ನಟಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಪೋಸ್ಟ್ ಅನ್ನು ಹಂಚಿಕೊಂಡ ಕರೀನಾ ಕಪೂರ್ ಖಾನ್ ' ಹುಟ್ಟುಹಬ್ಬದ ಶುಭಾಶಯಗಳು ಡಾರ್ಲಿಂಗ್ ಸಾರಾ ' ನಿನಗೆ ನ್ನ ಪ್ರೀತಿಯೊಂದಿಗೆ ಕುಂಬಳಕಾಯಿ ಸಬ್ಜಿಯನ್ನು ಕೂಡ ನಿನಗಾಗಿ ಕಳಿಸುತ್ತಿದೇನೆ ' ಎಂದು ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ.
ಇದರೊಂದಿಗೆ ಕರೀನಾ ಹೃದಯದ ಎಮೋಜಿ ಮತ್ತು ಮಳೆಬಿಲ್ಲು ಚಿತ್ರವನ್ನು ಕೂಡ ಸೇರಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕರೀನಾ ಅವರ ಈ ಪೋಸ್ಟ್ ಹೆಚ್ಚು ವೈರಲ್ ಆಗುತ್ತಿದ್ದು ಜನರು ಮೆಚ್ಚಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಾರಾ "ನಾನು ಕರೀನಾಳನ್ನು ತಾಯಿ ಎಂದು ಪರಿಗಣಿಸಲು ಸಾಧ್ಯವಿಲ್ಲ, ನನಗೆ ನನ್ನ ಪ್ರೀತಿಯ ತಾಯಿ ಇದ್ದಾರೆ, ಅಷ್ಟೆ ಅಲ್ಲ ನಾನು ಅವರನ್ನು ಚಿಕ್ಕಮ್ಮ ಎಂದು ಸಹ ಕರೆಯಲು ಬಹಸುವುದಿಲ್ಲ, ಹೊರತಾಗಿ ಕರೀನಾ ಅಥವಾ ಕೆ ಎಂದೇ ಕರೆಯುತ್ತೇನೆ" ಎಂದು ಹೇಳಿದ್ದರು.
ಕರೀನಾ ಸಾರಾ ಹಾಗೂ ಇಬ್ರಾಹಿಂ ಅಲಿಯೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ. ಕೌಟುಂಬಿಕವಾಗಿ ಯಾವುದೇ ಕಾರ್ಯಕ್ರಮ ನಡೆದರೂ ಸಾರಾ ಮತ್ತು ಇಬ್ರಾಹಿಂ ಅಲಿ ಇರುತ್ತಾರೆ.