Karnataka Election 2023: ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಿ
ನಿಮ್ಮ ಒಂದು ಮತದ ಮೇಲೆ ದೇಶದ ಮತ್ತು ರಾಜ್ಯದ ಅಭಿವೃದ್ಧಿಯ ಅಳಿವು ಉಳಿವು ನಿಂತಿರುತ್ತದೆ. ಹೀಗಾಗಿ ಎಚ್ಚರಿಂದ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಂಡು ಹಕ್ಕು ಚಲಾಯಿಸಬೇಕು. ಹಣ-ಹೆಂಡದಂತಹ ಕ್ಷಣಿಕ ಸುಖಕ್ಕಾಗಿ ರಾಜ್ಯದ ಹಿತ ಮರೆತು ಮತವನ್ನು ಮಾರಿಕೊಳ್ಳಬೇಡಿ. ಕ್ಷೇತ್ರ ಹಾಗೂ ರಾಜ್ಯವನ್ನು ರಕ್ಷಿಸುವಂತಹ ಸಮರ್ಥ ನಾಯಕನಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು.
ನಿಮ್ಮ ದುರಾಸೆಯ ಮುಂದೆ ಉಳಿದಿರುವ ಅಲ್ಪಸ್ವಲ್ಪ ಮಹತ್ವವನ್ನು ಮರೆಮಾಡದಿರಿ. ಇರುವ ಆಯ್ಕೆಗಳಲ್ಲಿ ಸರಿಯಾದ್ದನ್ನು ಆಯ್ದುಕೊಂಡು ರಾಜ್ಯದ ಉನ್ನತಿಗೆ ನಿಮ್ಮ ಕೊಡುಗೆ ನೀಡಬೇಕು. ಹಣದ ಆಸೆಗಾಗಿ ನಿಮ್ಮ ಆತ್ಮಾಭಿಮಾನಕ್ಕೆ ಅಭ್ಯರ್ಥಿಯ ಹಿಂದಿರುವ ಶಕ್ತಿ ನೋಡದೆ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಬೇಕು. ನಿಮಗೆ ಸೂಕ್ತ ಅಭ್ಯರ್ಥಿ ಅನ್ನಿಸಿದರೆ ಮಾತ್ರ ಅವರಿಗೆ ಮತ ನೀಡಬೇಕು. ಯಾವುದೇ ಕಾರಣಕ್ಕೂ ನಿಮ್ಮ ಮತ ಭ್ರಷ್ಟ ವ್ಯಕ್ತಿಗೆ ಹೋಗಬಾರದು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಸಾರ್ವಜನಿಕರ ದನಿ. ದೇಶದ ಮತ್ತು ರಾಜ್ಯ ಭದ್ರಬುನಾದಿಗಿರುವ ಅಸ್ತ್ರ. ನಿಮ್ಮ ಹಕ್ಕು ಸಾಂವಿಧಾನಿಕ ಕರ್ತವ್ಯ. ಮರೆಯದೆ ಮತ ಚಲಾಯಿಸಿ ಸದೃಢ ದೇಶ-ರಾಜ್ಯ ನಿರ್ಮಾಣಕ್ಕೆ ಕೊಡುಗೆ ನೀಡಿ. ಅರ್ಹ ಮತ್ತು ಜನಪರ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ನಿಮ್ಮ ಕರ್ತವ್ಯ.
ಯಾವುದೇ ಆಮಿಷಕ್ಕೆ ಒಳಗಾಗದೆ ನಿರ್ಭಯವಾಗಿ, ಪಾರದರ್ಶಕವಾಗಿ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ನಿಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳದೆ ಅದರ ಪಾವಿತ್ರ್ಯಯನ್ನು ಕಾಪಾಡಬೇಕು. ದೇಶವನ್ನು ಭ್ರಷ್ಟಮುಕ್ತಗೊಳಿಸಲು ಉತ್ತಮ ಜನಪ್ರತಿನಿಧಿಗಳನ್ನು ಚುನಾಯಿಸುವುದು ಮತದಾರನ ಕರ್ತವ್ಯ.
ದೇಶ ಮತ್ತು ರಾಜ್ಯದ ಅಭಿವೃದ್ಧಿ ಮಟ್ಟವನ್ನು ಉತ್ತುಂಗ ಶಿಖರಕ್ಕೇರಿಸಲು ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ಅಮೂಲ್ಯ ಮತವನ್ನು ಸೂಕ್ತ ಅಭ್ಯರ್ಥಿ ನೀಡಿ ದೇಶ-ರಾಜ್ಯದ ಪ್ರಗತಿಗೆ ಶ್ರಮಿಸಬೇಕು. ಪ್ರತಿಯೊಬ್ಬರೂ ಮರೆಯದೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಬೇಕು.