Karnataka Elections 2023: ರಾಜ್ಯ ವಿಧಾನಸಭಾ ಚುನಾವಣೆಯ ಇಂಟ್ರೆಸ್ಟಿಂಗ್ ಸಂಗತಿಗಳು

Wed, 10 May 2023-9:34 am,

ರಾಜ್ಯದ 224 ಕ್ಷೇತ್ರಗಳ ವಿಧಾನಸಭಾ ಚುನಾವಣೆಗೆ ಬಹುನಿರೀಕ್ಷಿತ ಮತದಾನ ಪ್ರಕ್ರಿಯೆಗೆ ಆರಂಭವಾಗಿದೆ.

ನಾಳೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಬೆಲೆಯೇರಿಕೆಯನ್ನು ಗಮನದಲ್ಲಿಟ್ಟುಕೊಂಡು ತಾವೆಲ್ಲರೂ ತೀರ್ಪು ನೀಡಬೇಕಿದೆ. ನಿಮ್ಮ ತೀರ್ಪು ಮುಂದಿನ ಐದು ವರ್ಷಗಳ ರಾಜ್ಯದ ಭವಿಷ್ಯ ನಿರ್ಧರಿಸುವುದರಿಂದ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಜ್ಞಾವಂತಿಕೆಯಿಂದ ಮತ ನೀಡಿ. ನಿಮ್ಮ ಮತದ… pic.twitter.com/5LghmRvNzp

— Siddaramaiah (@siddaramaiah) May 9, 2023

ರಾಜ್ಯದ ವಿವಿಧ ಮತಗಟ್ಟೆಯಲ್ಲಿ ಮತದಾನ ಆರಂಭವಾಗಿದ್ದು, ಜನರು ಮತದಾನಕ್ಕಾಗಿ ಆಗಮಿಸುತ್ತಿದ್ದಾರೆ.

ಕನ್ನಡ ನಾಡಿನ ಸಮಸ್ತ ಮತದಾರ ಬಂಧುಗಳೆ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಈ ನಾಡಿನ ಪ್ರಜೆಗಳಾದ ನಾವು, ನೀವೆಲ್ಲರೂ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸುರಕ್ಷಿತ, ಸುಭದ್ರ ಮತ್ತು ಸಶಕ್ತ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಬೇಕು. ದಯವಿಟ್ಟು ನಾಳೆ (ಮೇ 10…

— Basavaraj S Bommai (@BSBommai) May 9, 2023

ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ.

ಇಂದು ನನ್ನ ಸ್ವಕ್ಷೇತ್ರ ಶಿಗ್ಗಾಂವ್ ನಲ್ಲಿ ಮತದಾನಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಶ್ರೀ ಮಾರುತಿ ದೇವಸ್ಥಾನಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದೆನು. pic.twitter.com/5OYzc0lYLn

— Basavaraj S Bommai (@BSBommai) May 10, 2023

ಮೇ 13ರ ಶನಿವಾರ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದ ಜನರನ್ನು ಅದರಲ್ಲೂ ಯುವ ಮತ್ತು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು‌ ಮತ ಹಾಕುವಂತೆ ಹಾಗು ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸುವಂತೆ ಒತ್ತಾಯಿಸುವೆ.

— Narendra Modi (@narendramodi) May 10, 2023

ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ತಪ್ಪದೇ ಮತದಾನ ಮಾಡುವಂತೆ ಪ್ರಧಾನಿ ಮೋದಿ ಜನರಿಗೆ ಮನವಿ ಮಾಡಿದ್ದಾರೆ.  

ಕರ್ನಾಟಕದ ಮತದಾರರಿಗೆ ಪ್ರಧಾನಮಂತ್ರಿ ಶ್ರೀ @narendramodi ಯವರ ಮನವಿ. pic.twitter.com/oSMm7TGMwp

— BJP Karnataka (@BJP4Karnataka) May 8, 2023

ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಸಂಭ್ರಮದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಾಡಿನ ಸಮಸ್ತ ಮತದಾರ ಬಂಧುಗಳಲ್ಲಿ, ಅದರಲ್ಲೂ ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ ಯುವತಿಯರಲ್ಲಿ, ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಸಂಭ್ರಮದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೋರುತ್ತೇನೆ. ನಾಡಿನ ಉಜ್ವಲ ಭವಿಷ್ಯಕ್ಕಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ ತಪ್ಪದೇ ಎಲ್ಲರೂ ಮತ ಚಲಾಯಿಸಿ ಎಂದು ಈ ಮೂಲಕ…

— B.S.Yediyurappa (@BSYBJP) May 10, 2023

ZEENEWS TRENDING STORIES

By continuing to use the site, you agree to the use of cookies. You can find out more by Tapping this link