Karnataka Exit Poll Result: ಕರ್ನಾಟಕದಲ್ಲಿ ಯಾರ ಸರ್ಕಾರ ರಚನೆ? ಎಕ್ಸಿಟ್ ಪೋಲ್ ಭವಿಷ್ಯ..!
ZEE NEWS ಮತ್ತು MATRIZEನ ಸಮೀಕ್ಷೆಗಳ ಪ್ರಕಾರ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಕಾಂಗ್ರೆಸ್ 103-118 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅದೇ ರೀತಿ ಬಿಜೆಪಿ 79-94 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಜೆಡಿಎಸ್ 25-33 ಸ್ಥಾನ ಮತ್ತು 2ರಿಂದ 5 ಸೀಟುಗಳು ಇತರರ ಪಾಲಾಗಬಹುದು.
ZEE NEWS ಮತ್ತು MATRIZEನ ಕರ್ನಾಟಕ ಎಕ್ಸಿಟ್ ಪೋಲ್ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸ್ ಗರಿಷ್ಠ ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಶೇ.41ರಷ್ಟು ಮತಗಳು ‘ಕೈ’ ಪಕ್ಷದ ಪಾಲಾಗಲಿವೆ. ಇದಾದ ಬಳಿಕ ಬಿಜೆಪಿಗೆ ಶೇ.36, ಜೆಡಿಎಸ್‍ಗೆ ಶೇ.17ರಷ್ಟು ಮತಗಳು ದೊರೆಯುವ ಸಾಧ್ಯತೆ ಇದೆ. ಅದೇ ರೀತಿ ಶೇ.6ರಷ್ಟು ಮತಗಳು ಇತರರ ಪಾಲಾಗಲಿವೆ.
ಈ ಫಲಿತಾಂಶವನ್ನು ಕೇವಲ ರಾಜ್ಯ ವಿಧಾನಸಭೆ ಚುನಾವಣೆಗಷ್ಟೇ ಸೀಮಿತಗೊಳಿಸುವ ಹಾಗಿಲ್ಲ. ಇದು 2024ರ ಲೋಕಸಭೆ ಚುನಾವಣೆ ಮೇಲೂ ದೊಡ್ಡ ಪರಿಣಾಮ ಬೀರಲಿದೆ. ಬಿಜೆಪಿ ಗೆದ್ದರೆ ದಕ್ಷಿಣದಲ್ಲಿ ರಾಜಕೀಯ ಬಲ ಹೆಚ್ಚಲಿದೆ. ಇನ್ನೊಂದೆಡೆ ಕಾಂಗ್ರೆಸ್ ಬಹುಮತ ಪಡೆದರೆ ಬಿಜೆಪಿ ವಿರುದ್ಧ ವಿಶ್ವಾಸ ಹೆಚ್ಚಲಿದೆ. ಕರ್ನಾಟಕದ ಗೆಲುವು ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬಿಜೆಪಿಗೆ ಸಹಾಯ ಮಾಡುತ್ತದೆ. ಇನ್ನೊಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ವಿಪಕ್ಷಗಳ ಒಗ್ಗಟ್ಟು ಬಲಗೊಳ್ಳಲಿದೆ, ಕಾಂಗ್ರೆಸ್ ಮೇಲೆ ವಿರೋಧ ಪಕ್ಷಗಳ ವಿಶ್ವಾಸ ಹೆಚ್ಚಲಿದೆ.
ಬಿಜೆಪಿಗೆ ಕರ್ನಾಟಕದ ಗೆಲುವು ಲೋಕಸಭೆ ಚುನಾವಣೆಗೆ ಬೂಸ್ಟರ್ ಡೋಸ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಕಾಂಗ್ರೆಸ್‌ನ ಗೆಲುವು ಬಿಜೆಪಿಯ ದಕ್ಷಿಣ ಯೋಜನೆ ಮಾರ್ಗದ ಸವಾಲನ್ನು ಹೆಚ್ಚಿಸಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ದಕ್ಷಿಣದ 5 ರಾಜ್ಯಗಳ 129 ಲೋಕಸಭಾ ಸ್ಥಾನಗಳ ಹಾದಿ ಸುಲಭವಾಗಲಿದೆ. ಮೇ 13ರಂದು ಕಾಂಗ್ರೆಸ್ ಮ್ಯಾಜಿಕ್ ನಂಬರ್ ಪಡೆದರೆ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ಚುನಾವಣೆಗಳಲ್ಲಿ ಸ್ಪರ್ಧೆಯು ತೀವ್ರವಾಗಿರುತ್ತದೆ.