ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ...ವೇತನ ಸಹಿತ ಮುಟ್ಟಿನ ರಜೆ ನೀಡಲು ಸರ್ಕಾರ ತೀರ್ಮಾನ! ಒಂದಲ್ಲ, ಎರಡಲ್ಲ... ಇನ್ಮುಂದೆ ಸಿಗಲಿದೆ 6 ದಿನಗಳ ಪೀರಿಯಡ್ಸ್ ರಜೆ!

Thu, 19 Sep 2024-8:13 pm,

ಕರ್ನಾಟಕ ಸರ್ಕಾರವು ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವರ್ಷಕ್ಕೆ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಲು ಯೋಜಿಸುತ್ತಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

 

ಮಹಿಳೆಯರ ಋತುಚಕ್ರದ ರಜೆ ಮತ್ತು ಮುಟ್ಟಿನ ಆರೋಗ್ಯ ಉತ್ಪನ್ನಗಳನ್ನು ಉಚಿತವಾಗಿ ಪೂರೈಸುವ ಬಗ್ಗೆ ಕರಡು ಮಸೂದೆಯನ್ನು ರಚಿಸಲು ಸರ್ಕಾರವು 18 ಸದಸ್ಯರ ಸಮಿತಿಯನ್ನು ರಚಿಸಿದೆ.

 

ಇನ್ನು ಈ ಬಗ್ಗೆ ಮಾತನಾಡಿದ, ಕಾರ್ಮಿಕ ಸಚಿವ ಸಂತೋಷ್ ಲಾಡ್, "ನಾವು ಸಲಹೆಗಳನ್ನು ಪರಿಗಣಿಸುತ್ತಿದ್ದೇವೆ ಮತ್ತು ಸಮಿತಿಯ ಸದಸ್ಯರೊಂದಿಗೆ ಸಭೆಗೆ ಕರೆದಿದ್ದೇವೆ. ಈ ಉಪಕ್ರಮವು ಮಹಿಳಾ ಉದ್ಯೋಗಿಗಳ ಬಗ್ಗೆ ನಮಗಿರುವ ಕಾಳಜಿಯನ್ನು ತೋರಿಸುತ್ತದೆ. ಮಹಿಳೆಯರು ಜೀವನದಲ್ಲಿ ಗಮನಾರ್ಹವಾದ ಏರಿಳಿತಗಳನ್ನು ಅನುಭವಿಸುತ್ತಾರೆ. ಮಹಿಳೆಯರಿಗೆ ಪೀರಿಯಡ್ಸ್‌ ಸಮಯದಲ್ಲಿ ಯಾವಾಗ ಬೇಕೋ ಆವಾಗ ರಜೆ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ" ಎಂದು ಹೇಳಿದ್ದಾರೆ.

 

“ವಿಶೇಷವಾಗಿ ಮದುವೆಯ ನಂತರ ಅಥವಾ ಮಕ್ಕಳಿರುವಾಗ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ” ಎಂದು ಲಾಡ್ ಹೇಳಿದರು.

 

ಕಳೆದ ತಿಂಗಳು, ಒಡಿಶಾ ಸರ್ಕಾರವು ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆಯನ್ನು ಘೋಷಿಸಿತು. 1992 ರಲ್ಲಿ, ಬಿಹಾರ ಮಹಿಳೆಯರಿಗೆ ತಿಂಗಳಿಗೆ ಎರಡು ದಿನಗಳ ಸಂಬಳ ಸಹಿತ ಮುಟ್ಟಿನ ರಜೆಯನ್ನು ನೀಡಲು ಪ್ರಾರಂಭಿಸಿತು. ಇನ್ನು ಕೇರಳ ರಾಜ್ಯವು 2023 ರಲ್ಲಿ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲು ಪ್ರಾರಂಭಿಸಿತು.

 

ಅರುಣಾಚಲ ಪ್ರದೇಶದ ಸಂಸದ ನಿನೊಂಗ್ ಎರಿಂಗ್ ಅವರು 2017 ರಲ್ಲಿ ಮುಟ್ಟಿನ ರಜೆ ಸಂಬಂಧ ಮಸೂದೆಯನ್ನು ಪರಿಚಯಿಸಿದರು, ಇದು ಮಹಿಳೆಯರಿಗೆ ಪ್ರತಿ ತಿಂಗಳು ಎರಡು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಆದರೆ ಈ ಮಸೂದೆ ಇನ್ನೂ ಅಂಗೀಕಾರವಾಗಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link