ಕಾರ್ತಿಕ ಪೂರ್ಣಿಮೆಯಂದು ನಕ್ಷತ್ರದಂತೆ ಹೊಳೆಯಲಿದೆ ಈ ರಾಶಿಗಳ ಅದೃಷ್ಟ: ಮಹಾಧನ ಯೋಗದಿಂದ ಬಂಪರ್ ಯಶಸ್ಸು, ಬಹುದಿನದ ಕನಸೆಲ್ಲಾ ನನಸು

Sat, 25 Nov 2023-8:34 pm,

ಕಾರ್ತಿಕ ಮಾಸದ ಹುಣ್ಣಿಮೆಗೂ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ದಿನ, ಜನರು ದಾನ ಕಾರ್ಯಗಳನ್ನು ಪೂರ್ಣ ಮನಸ್ಸಿನಿಂದ ಮಾಡುತ್ತಾರೆ. ಈ ರೀತಿ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬುದು ನಂಬಿಕೆ. ಹಲವು ವರ್ಷಗಳ ನಂತರ ಕಾರ್ತಿಕ ಮಾಸದ ಹುಣ್ಣಿಮೆಯಂದು ವಿಶೇಷ ಹಾಗೂ ಅಪರೂಪದ ಯೋಗವೊಂದು ರೂಪುಗೊಳ್ಳುತ್ತಿದೆ. ಈ ದಿನ ಬುಧನು ಧನು ರಾಶಿಯನ್ನು ಪ್ರವೇಶಿಸುತ್ತಾನೆ.

ನವೆಂಬರ್ 27 ಕಾರ್ತಿಕ ಮಾಸದ ಹುಣ್ಣಿಮೆಯಾಗಿದ್ದು, ಈ ದಿನ ಬುಧ ಗ್ರಹವು ಧನು ರಾಶಿಯನ್ನು ಪ್ರವೇಶಿಸಲಿದೆ ಬುಧ ಗ್ರಹದ ರಾಶಿ ಬದಲಾವಣೆ ಮಹಾ ಧನ ಯೋಗವನ್ನು ಸೃಷ್ಟಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಹಾ ಧನ ಯೋಗವು ಮೂರು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.

ಮೇಷ ರಾಶಿ: ಇನ್ನು ಈ ರಾಶಿಯವರಿಗೆ ಮಹಾಧನ ಯೋಗವು ತುಂಬಾ ವಿಶೇಷವಾಗಿರುತ್ತದೆ. ಈ ರಾಶಿಯವರಿಗೆ ವಿದೇಶಕ್ಕೆ ಹೋಗುವ ಅವಕಾಶವೂ ಸಿಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿಯೂ ಸಹ ಬೆಳವಣಿಗೆಯ ಅಪಾರ ಅವಕಾಶವಿದೆ.

ಮಿಥುನ ರಾಶಿ: ಮಹಾಧನ ಯೋಗವು ಮಿಥುನ ರಾಶಿಯವರಿಗೆ ಅಪಾರ ಸಂತೋಷವನ್ನು ತರಲಿದೆ. ಈ ಜನರು ಕುಟುಂಬದ ಬೆಂಬಲವನ್ನು ಪಡೆಯುತ್ತಾರೆ. ಬದುಕು ವೈಭವದ ಉತ್ತುಂಗದಲ್ಲಿರುತ್ತದೆ.

ಮಕರ ರಾಶಿ: ಈ ಯೋಗವು ಮಕರ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಅವಧಿಯಲ್ಲಿ ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚುತ್ತದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link