ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕ ಶಂಕರ್‌ಗೆ ʻಅಂತಹʼ ಫೋಟೋ ಕಳುಹಿಸಿದ ಸ್ಟಾರ್ ಹೀರೋಯಿನ್..! ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ..!
Actress Kasturi: ಸಿನಿಮಾದಲ್ಲಿ ಆಕ್ಟ್ ಮಾಡುವುದು ಎಲ್ಲರ ಕನಸು, ಒಂದು ಸಿನಿಮಾದಲ್ಲಿ ಅವಕಾಶ ಸಿಗುತ್ತೆ ಅಂದ್ರೆ ಸಾಕ ಜನರು ಏನು ಬೇಕಾದರು ಮಾಡುುದಕ್ಕೆ ಸಿದ್ದರಿರುತ್ತಾರೆ, ಆದರೆ ಇಲ್ಲೊಬ್ಬ ನಟಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ನಿರ್ದೇಶಕರಿಗೆ ಬಿಕಿನಿ ತೊಟ್ಟ ಫೋಟೋ ಕಳುಹಿಸಿದ್ದರಂತೆ. ಅಷ್ಟಕ್ಕೂ ಆ ಸ್ಟಾರ್ ಹೀರೋಯಿನ್ ಯಾರು ಗೊತ್ತಾ..? ತಿಳಿಯಲು ಮುಂದೆ ಓದಿ...
ನಟಿ ಕಸ್ತೂರಿ ಈ ಹೆಸರು ಯಾರಗೆ ತಾನೆ ಗೊತ್ತಿಲ್ಲ ಹೇಳಿ, ತಮ್ಮ ಕಾಂಟ್ರವರ್ಸಿ ಹೇಳಿಕೆಗಳ ಮೂಲಕ ಈ ನಟಿ ಸದ್ಯ ಸದಾ ಸುದ್ದಿಯಲ್ಲಿರುತ್ತಾರೆ
ಆದರೆ, ಒಂದು ಕಾಲದಲ್ಲಿ ಈ ನಟಿ ತಮ್ಮ ಸೌಂದರ್ಯ ಹಾಗೂ ತಮ್ಮ ಮೈ ಮಾಟದ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು.
ನಿಪ್ಪುರವ್ವ, ಗಾಡ್ ಫಾದರ್, ಚಿಲಕ್ಕೊಟ್ಟುಡು ನಂತಹ ಹಲವಾರು ಸಿನಿಮಾಗಳಲ್ಲಿ ನಟಿ ಕಸ್ತೂರಿ ನಟಿಸಿದ್ದು, ಅಪಾರ ಅಭಿಮಾನಿಗಳನ್ನು ಸಹ ನಟಿ ಹೊಂದಿದ್ದಾರೆ.
ತೆಲುಗು, ತಮಿಳು, ಕನ್ನಡ, ಮಲಯಾಳಂ ಜೊತೆಗೆ ದಕ್ಷಿಣದ ನಾಲ್ಕು ಭಾಷೆಯ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಆ ಕಾಲದಲ್ಲಿ ನಟಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ.
ಹೀಗೆ ಸಿನಿಮಾಗೆ ಅವಕಾಶ ಸಿಕ್ಕ ನಂತರ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಒಂದು ಕಾಲದಲ್ಲಿ ಸಿನಿಮಾ ಅವಕಾಶಕ್ಕಾಗಿ ಏನು ಮಾಡಿದ್ದರು ಎಂಬದನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ.
ನಟಿ ಕಸ್ತೂರಿಯವರಿಗೆ ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು, ಆದರೆ ಅವರ ಸಿನಿಮಾದಲ್ಲಿ ಅವಕಾಶ ಪಡೆಯುವುದೆಂಬುದು ಅಷ್ಟು ಸುಲಭದ ಮಾತಾಗಿರಲಿಲ್ಲ.
ಶಂಕರ್ ಅವರು ತಮ್ಮ ಸಿನಿಮಾ ಒಂದಕ್ಕಾಗಿ ಆಡಿಷನ್ ಅನ್ನು ಅರೇಂಜ್ ಮಾಡಿದ್ದರಂತೆ, ನಟಿ ಅಲ್ಲಿ ಹೋಗಿ ಆಡಿಷನ್ ಕೊಟ್ಟು ಬಂದ ನಂತರ ಅವರನ್ನು ಇಂಪ್ರೆಸ್ ಮಾಡಲು ನಟಿ ಬಿಕಿನಿ ಫೋಟೋಗಳನ್ನು ಕಳುಹಿಸಿದ್ದರಂತೆ.