Photo Gallery: ‘ಗೃಹಪ್ರವೇಶ’ ಮಾಡಿದ ಕಿರುತೆರೆ ಫೇಮಸ್ ಜೋಡಿ ಚಂದನ್-ಕವಿತಾ
![ಗೃಹಪ್ರವೇಶ ಮಾಡಿದ ಫೇಮಸ್ ಜೋಡಿ Kavitha Gowda And Chandan Kumar](https://kannada.cdn.zeenews.com/kannada/sites/default/files/2022/06/25/245851-kavitha-01.png?im=FitAndFill=(500,286))
ಕಿರುತೆರೆಯ ಫೇಮಸ್ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ.
![ಹೊಸ ಮನೆ ಖರೀದಿ Kavitha Gowda And Chandan Kumar](https://kannada.cdn.zeenews.com/kannada/sites/default/files/2022/06/25/245852-kavitha-02.png?im=FitAndFill=(500,286))
ನಟಿ ಕವಿತಾಗೌಡ ಮತ್ತು ನಟ ಚಂದನ್ ಕುಮಾರ್ ಹೊಸ ಮನೆ ಖರೀದಿಸಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಅಭಿಮಾನಿಗಳ ಜೊತೆಗೆ ಈ ಜೋಡಿ ಮಾಹಿತಿ ಹಂಚಿಕೊಂಡಿತ್ತು. ಇದೀಗ ಆಪ್ತರ ಸಮ್ಮುಖದಲ್ಲಿ ಅದ್ದೂರಿ ಗೃಹಪ್ರವೇಶ ಮಾಡಿದ್ದಾರೆ.
![ಫೋಟೋ & ವಿಡಿಯೋ ವೈರಲ್ Kavitha Gowda And Chandan Kumar](https://kannada.cdn.zeenews.com/kannada/sites/default/files/2022/06/25/245853-kavitha-03.png?im=FitAndFill=(500,286))
ಚಂದು ಮತ್ತು ಕವಿತಾ ದಂಪತಿಯ ಗೃಹಪ್ರವೇಶದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಸಾವಿರಾರು ಅಭಿಮಾನಿಗಳು ಕಾಮೆಂಟ್ಸ್ ಮಾಡುವ ಮೂಲಕ ಜೋಡಿಗೆ ಶುಭ ಹಾರೈಸಿದ್ದಾರೆ.
ಗೃಹಪ್ರವೇಶದ ದಿನ ಚಂದನ್ ಮತ್ತು ಕವಿತಾ ಟ್ರೇಡಿಷನಲ್ ಉಡುಪಿನಲ್ಲಿ ಮಿಂಚಿದರು. ಈ ಫೋಟೋಗಳ ಮೂಲಕ ಈ ಜೋಡಿಯ ಮದುವೆಯನ್ನು ಅಭಿಮಾನಿಗಳು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದ ಜೋಡಿ ಚಂದನ್ ಮತ್ತು ಕವಿತಾ ಪೋಷಕರ ಒಪ್ಪಿಗೆ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.