Kavya Gowda: ಹೊಸ ವರ್ಷಕ್ಕೆ ಮುದ್ದಾದ ಮಗುವಿನ ನಿರೀಕ್ಷೆಯಲ್ಲಿರುವ ಗಾಂಧಾರಿ ನಟಿ!

Sat, 02 Dec 2023-3:26 pm,

ಕಿರುತೆರೆ ನಟಿ ಕಾವ್ಯ ಗೌಡ ತಮ್ಮ ಮದುವೆಯ ಎರಡನೇ ವಾರ್ಷಿಕೊತ್ಸವದಂದು ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 

ನಟಿ ಕಾವ್ಯ ಗೌಡ 2021ರ ಡಿಸೆಂಬರ್‌ 3ನೇ ತಾರೀಕಿನಂದು ಸೋಮಶೇಖರ್‌ ಜೊತೆ ವಿವಾಹವಾಗಿದ್ದರು.

ಕಾವ್ಯ ಗೌಡ ತಮ್ಮ ಮದುವೆ ವಾರ್ಷಿಕೊತ್ಸವದಂದು ತಾಯಿಯಾಗುತ್ತಿರುವ ಸಂತೋಷದ ವಿಚಾರವನ್ನು ಪೋಟೋಶೂಟ್‌ ಮಾಡಿಸಿ, ಅದನ್ನು ಪೋಸ್ಟ್‌ ಮಾಡುವುದರ ಮೂಲಕ ತಿಳಿಸಿದ್ದಾರೆ.

ನಟಿ ಕಾವ್ಯ ಗೌಡರವರ ಮುದ್ದಾದ ಬೇಬಿ ಬಂಪ್‌ ಫೋಟೋಗಳ ಪೊಸ್ಟ್‌ಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

ಕಾವ್ಯ ಗೌಡ ಕೆಲವು ತಿಂಗಳ ಹಿಂದೆಯೆಷ್ಟೇ ತಾವು ಜ್ಯೂವೆಲರಿ ಡಿಸೈನರ್‌ ಆಗಿರುವ ವಿಷಯವನ್ನು ಹಂಚಿಕೊಂಡಿದ್ದರು.

ಕಾವ್ಯ ಗೌಡ ಮೊದಲು ಪ್ಯಾಟೇ ಮಂದಿ ಕಾಡಿಗ್‌ ಬಂದ್ರು ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು.

ನಟಿ ಕಾವ್ಯ ಗೌಡ ಮೊದಲು ಮೀರಾ ಮಾಧವ ಸೀರಿಯಲ್‌ನಿಂದ ನಟನೆ ಪ್ರಾರಂಭಿಸಿ, ಬಳಿಕ ಶುಭ ವಿವಾಹ, ಗಾಂಧಾರಿ ಹಾಗೂ ರಾಧ ರಮಣ ಧಾರವಾಹಿಗಳಲ್ಲಿ ಅಭಿನಯಿಸುವುದರ ಜೊತೆ ಹಲವಾರು ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಕಾವ್ಯ ಗೌಡ ಕಿರುತೆರೆ ಮಾತ್ರವಲ್ಲದೇ ಬಕಾಸುರ ಸಿನಿಮಾದಲ್ಲಿ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link