ಕಾವ್ಯಾ ಮಾರನ್ ಈ ಪ್ರಭಾವಿ ರಾಜಕಾರಣಿಯ ಮೊಮ್ಮಗಳು.. ಇವರ ತಂದೆ ಯಾರು ಗೊತ್ತೇ! ತಾಯಿ, ಚಿಕ್ಕಪ್ಪನೂ ಸಿಕ್ಕಾಪಟ್ಟೆ ಪವರ್‌ಫುಲ್
Who Is Kavya Maran: ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್. ದೇಶದ ಪ್ರಸಿದ್ಧ ಉದ್ಯಮಿ. ಸನ್ ಗ್ರೂಪ್‌ನ ಮಾಲೀಕರಾಗಿರುವ ಕಲಾನಿಧಿ ಮಾರನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಸಂಸ್ಥಾಪಕರಾಗಿದ್ದಾರೆ.
ಕಾವ್ಯಾ ಮಾರನ್ ತಂದೆ ಕಲಾನಿಧಿ ಮಾರನ್ ಫೋರ್ಬ್ಸ್ ಪ್ರಕಟಿಸಿದ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ 82ನೇ ಸ್ಥಾನದಲ್ಲಿದ್ದಾರೆ. ಕಲಾನಿಧಿ ಮಾರನ್ ಅವರ ಒಟ್ಟು ಸಂಪತ್ತು 23,633 ಕೋಟಿ ರೂ. ಆಗಿದೆ.
ಕಲಾನಿಧಿ ಮಾರನ್ ಮಾಧ್ಯಮ ಸಾಮ್ರಾಜ್ಯವನ್ನೇ ಸ್ಥಾಪಿಸಿದ ಖ್ಯಾತಿ ಹೊಂದಿದ್ದಾರೆ. ಇವರನ್ನು 'ಭಾರತದ ದೂರದರ್ಶನದ ಕಿಂಗ್' ಎಂದೇ ಕರೆಯುವರು. ಕಲಾನಿಧಿ ಮಾರನ್ ಟಿವಿ ಚಾನೆಲ್‌ಗಳು, ಪತ್ರಿಕೆಗಳು, ವಾರಪತ್ರಿಕೆಗಳು, FM ರೇಡಿಯೋ, DTH ಸೇವೆ ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದಾರೆ.
ಕಲಾನಿಧಿ ಮಾರನ್ 2010 ರಿಂದ 2015 ರವರೆಗೆ ಸ್ಪೈಸ್ ಜೆಟ್ ಏರ್‌ಲೈನ್ ಪಾಲುದಾರರಾಗಿದ್ದರು. ಕಾವ್ಯಾ ಮಾರನ್ ಚಿಕ್ಕಪ್ಪ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಕಲಾನಿಧಿ ಮಾರನ್ ಸಹೋದರ ದಯಾನಿಧಿ ಮಾರನ್ ತಮಿಳುನಾಡಿನ ಪ್ರಭಾವಿ ರಾಜಕೀಯ ನಾಯಕ. ಮಾಜಿ ಸಚಿವರಾಗಿ ಕೆಲಸ ಮಾಡಿದ್ದಾರೆ.
ಕಲಾನಿಧಿ ಮಾರನ್ ಅವರ ಪತ್ನಿ ಮತ್ತು ಕಾವ್ಯಾ ಮಾರನ್ ಅವರ ತಾಯಿಯ ಹೆಸರು ಕಾವೇರಿ. ಇವರು ಸಹ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ.
ಕಾವ್ಯಾ ಮಾರನ್ ತಂದೆ ಕಲಾನಿಧಿ ಮಾರನ್ ತಮಿಳುನಾಡು ಮಾಜಿ ಸಿಎಂ ಎಂ.ಕರುಣಾನಿಧಿ ಅವರ ಮೊಮ್ಮಗನಾಗಿದ್ದಾರೆ.
ಕಾವ್ಯಾ ಮಾರನ್ ಅವರ ಅಜ್ಜ ಭಾರತದ ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್. ಇವರು ಎಂ.ಕರುಣಾನಿಧಿ ಪುತ್ರ ಮತ್ತು ಕಲಾನಿಧಿ ಮಾರನ್ ಅವರ ತಂದೆ.
ಇಷ್ಟೆಲ್ಲ ರಾಜಕೀಯ ಹಿನ್ನೆಲೆಯುಳ್ಳ ಕಾವ್ಯಾ ಮಾರನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಹ ಸಂಸ್ಥಾಪಕಿ. ಕಾವ್ಯಾ ಮಾರನ್ ಅವರ ಒಟ್ಟು ಆಸ್ತಿ ಸುಮಾರು 409 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾವ್ಯಾ ಮಾರನ್ ಪದವಿ ಪಡೆದಿದ್ದಾರೆ. ಯುಕೆಯ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್‌ನಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.