ವಯಸ್ಸಲ್ಲಿ ತನಗಿಂತ 10 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಕಾವ್ಯ ಮಾರನ್ ಡೇಟಿಂಗ್! ಆತ ಬೇರಾರು ಅಲ್ಲ... ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್
ಕಾವ್ಯಾ ಮಾರನ್... ಭಾರತೀಯ ಕ್ರಿಕೆಟ್ ಲೋಕಕ್ಕೆ ಈ ಹೆಸರು ಪರಿಚಿತ. ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಓನರ್ ಕಾವ್ಯಾ ಮಾರನ್ ಎಲ್ಲರಿಗೂ ಗೊತ್ತಿರುವವರೇ. ಇನ್ನು ಇವರನ್ನು ಅಭಿಮಾನಿಗಳು ʼಕಾವ್ಯಾ ಪಾಪಾʼ ಎಂದೂ ಕರೆಯುವುದುಂಟು.
ಐಪಿಎಲ್ ಬಂತೆಂದರೆ ಸಾಕು ಕಾವ್ಯಾ ಮಾರನ್ ಸಖತ್ ಹೈಲೈಟ್ ಆಗುತ್ತಾರೆ. ಸ್ಟೇಡಿಯಂನಲ್ಲಿ ಕುಳಿತು ತನ್ನ ತಂಡವನ್ನು ಓರ್ವ ಮಾಲೀಕಳಂತಲ್ಲದೆ, ಅಪ್ಪಟ ಅಭಿಮಾನಿಯಾಗಿ ಹುರಿದುಂಬಿಸುವುದನ್ನು ಕಾಣಬಹುದು.
ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಇಷ್ಟಪಡದವರು ಇರಬಹುದು, ಆದ್ರೆ ಕಾವ್ಯ ಮಾರನ್ ಅವರನ್ನು ಮಾತ್ರ ಅತಿ ಹೆಚ್ಚು ಕ್ರಿಕೆಟ್ ಪ್ರಿಯರು ಇಷ್ಟಪಡುತ್ತಾರೆ. ಏಕೆಂದರೆ ಆಕೆ ತನ್ನ ತಂಡವನ್ನು ನಿರ್ವಹಿಸುವ ಮತ್ತು ಹುರಿದುಂಬಿಸುವ ರೀತಿಯೇ ವಿಭಿನ್ನವಾದದ್ದು.
ಇನ್ನು ಕಾವ್ಯಾ ಮಾರನ್ ಬಗ್ಗೆ ಅದೆಷ್ಟೋ ವದಂತಿಗಳು ಮುನ್ನೆಲೆಗೆ ಬರುತ್ತಿರುತ್ತವೆ. ಆಕೆ ಆ ನಟರ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ, ಈ ಉದ್ಯಮಿ ಜೊತೆ ಸುತ್ತಾಡುತ್ತಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿರುತ್ತವೆ. ಇದೀಗ ಇವೆಲ್ಲದರ ಮಧ್ಯೆ ಟೀಂ ಇಂಡಿಯಾದ ಓರ್ವ ಕ್ರಿಕೆಟಿಗನ ಜೊತೆ ಕಾವ್ಯಾ ಡೇಟ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬುತ್ತಿದೆ.
ಅಷ್ಟಕ್ಕೂ ಆತ ಕಾವ್ಯಾಗಿಂತ 10 ವರ್ಷ ಕಿರಿಯವ. ಇನ್ನು ಈ ವದಂತಿ ಹಬ್ಬಿದ್ದು ಕಳೆದ ಬಾರಿ ನಡೆದ ಐಪಿಎಲ್ ಸಂದರ್ಭದಲ್ಲಿ.
ಕಾವ್ಯಾ ಮಾರನ್ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಈ ಹಿಂದೆ ಕಾವ್ಯಾ ಮಾರನ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಆಗ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಈ ಜೋಡಿ ತಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ವದಂತಿಗೆ ಫುಲ್ ಸ್ಟಾಪ್ ಇಟ್ಟಿದ್ದರು. ಅದಾದ ನಂತರ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಜೊತೆಯಲ್ಲಿ ಕಾಣಿಸಿಕೊಂಡ ಕಾವ್ಯಾ, ತಮ್ಮ ನಡುವೆ ಏನೋ ಇದೆ ಎಂಬ ಸಂಕೇತವನ್ನು ನೀಡಿದರು. ಆದರೆ ಈ ಸಂಬಂಧ ಕೂಡ ಹೆಚ್ಚು ಕಾಲ ಉಳಿದಿರಲಿಲ್ಲ.
ಇದೀಗ ಕಾವ್ಯ, ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಅಭಿಷೇಕ್ ಶರ್ಮಾ ಜೊತೆ ಡೇಟಿಂಗ್ʼಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಅಭಿಷೇಕ್ ಶರ್ಮಾ ಹಲವು ವರ್ಷಗಳಿಂದ ಸನ್ ರೈಸರ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಸ್ಟಾರ್ ಆಟಗಾರರನ್ನೂ ತಂಡದಿಂದ ತೆಗೆದು ಹಾಕಿರುವ ಕಾವ್ಯಾ ಮಾರನ್, ಅಭಿಷೇಕ್ ಶರ್ಮಾ ಅವರನ್ನು ಮಾತ್ರ ತಂಡದಲ್ಲಿ ಮುಂದುವರಿಸಿದ್ದರು. ಇನ್ನು ಈ ಸಂಬಂಧವು ಯಾವ ರೀತಿಯ ಸಂಬಂಧವಾಗಿ ಬದಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.