Kedar Yog: ಕೇದಾರ ಯೋಗದಿಂದ ಈ 3 ರಾಶಿಗಳಿಗೆ ಭಾಗ್ಯೋದಯ, ದುಡ್ಡು ಹುಡುಕಿ ಬರುತ್ತೆ.. ಸ್ಥಾನ, ಪ್ರತಿಷ್ಠೆ ಹೆಚ್ಚುತ್ತೆ!

Thu, 15 Jun 2023-7:30 am,

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಿಸುತ್ತದೆ. ಇದನ್ನು ಗ್ರಹಗಳ ಚಲನೆ ಎಂದೂ ಕರೆಯುತ್ತಾರೆ. ಇದರಿಂದ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಪ್ರಸ್ತುತ, ಗ್ರಹಗಳ ಸ್ಥಾನಗಳು ಒಟ್ಟಾಗಿ ಕೇದಾರ ಯೋಗವನ್ನು ನಿರ್ಮಿಸಿವೆ.   

ಪ್ರಸ್ತುತ ಗ್ರಹಗಳ ಸ್ಥಾನದಿಂದಾಗಿ ಈ ಮಂಗಳಕರ ಕೇದಾರ ಯೋಗ ರೂಪುಗೊಂಡಿದೆ. 3 ರಾಶಿಯ ಜನರಿಗೆ ಇದು ತುಂಬಾ ಶುಭಫಲಗಳನ್ನು ನೀಡಲಿದೆ. ಕೇದಾರ ಯೋಗವು ಈ ಜನರಿಗೆ ಅದೃಷ್ಟವನ್ನು ತರುತ್ತದೆ.   

ಮಕರ ರಾಶಿ: ಈ ರಾಶಿಯವರ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ನೀವು ಹೊಸ ಮನೆ, ಕಾರು, ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಉದ್ಯೋಗಸ್ಥರಿಗೆ ಬಡ್ತಿ, ನ್ಕ್ರಿಮೆಂಟ್ ಸಿಗಬಹುದು. ವ್ಯಾಪಾರದಲ್ಲಿಯೂ ಲಾಭವಾಗಬಹುದು. ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ.   

ಕರ್ಕಾಟಕ ರಾಶಿ: ಈ ಸಮಯದಲ್ಲಿ ದೊಡ್ಡ ಆಸ್ತಿ ನಿಮ್ಮ ಪಾಲಾಗುತ್ತದೆ. ಉದ್ಯೋಗದಲ್ಲಿರುವವರು ದೊಡ್ಡ ಹುದ್ದೆಯನ್ನು ಪಡೆಯಬಹುದು. ನಿಮ್ಮ ಖ್ಯಾತಿ, ಗೌರವ ಹೆಚ್ಚಾಗಲಿದೆ. ಗ್ಲಾಮರ್, ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.   

ಮೇಷ ರಾಶಿ: ಮೇಷ ರಾಶಿಯವರಿಗೆ ಕೇದಾರ ಯೋಗ ಫಲಕಾರಿಯಾಗಲಿದೆ. ಈ ಜನರು ಅಪಾರ ಹಣ ಪಡೆಯುತ್ತಾರೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಧನಲಾಭವಾಗಲಿದೆ. ಸಿಕ್ಕಿ ಹಾಕಿಕೊಂಡಿದ್ದ ಹಣ ಈಗ ಕೈ ಸೇರುವುದು. ಮಾತಿನ ಬಲದ ಮೇಲೆ ನೀವು ಕೆಲಸದಲ್ಲೂ ಜಯ ಕಾಣುವಿರಿ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link