ಕರೋನಾ ಕಾಲದಲ್ಲಿ ಈ ಐದು ಮೆಡಿಕಲ್ ಉಪಕರಣ ಮನೆಯಲ್ಲಿರಲಿ.!
ಮೊದಲು ಬಿಪಿ ಚೆಕ್ ಮಾಡಲು ಡಾಕ್ಟರ್ ಬಳಿ ಹೋಗಲೇ ಬೇಕಾದ ಅಗತ್ಯ ಇತ್ತು. ಇವತ್ತು ಕೆಲವೊಂದು ಉಪಕರಣಗಳ ನೆರವಿನಿಂದ ಮನೆಯಲ್ಲಿದ್ದುಕೊಂಡು ನಿಮ್ಮ ಹಾಗೂ ನಿಮ್ಮ ಪರಿವಾರದ ಆರೋಗ್ಯದ ಕಾಳಜಿ ಮಾಡಬಹುದಾಗಿದೆ. ನಿಮ್ಮ ಮನೆಯಲ್ಲಿ ಯಾರಾದರೂ ಹೈ ಅಥವಾ ಲೋ ಬಿಪಿಯಿಂದ ಬಳಲುತಿದ್ದರೆ, ಖಂಡಿತಾ ಮನೆಯಲ್ಲೊಂದು ಅಟೋಮ್ಯಾಟಿಕ್ ಎಲೆಕ್ಟ್ರಾನಿಕ್ ಬ್ಲಡ್ ಪ್ರೆಶರ್ ಮಾನಿಟರ್ ಇರಲೇಬೇಕು. ಇದರಿಂದ ನೀವೆ ಖುದ್ದು ಬಿಪಿ ಚೆಕ್ ಮಾಡಿಸಿಕೊಳ್ಳಬಹುದು.
ಕರೋನಾ ಕಾಲದಲ್ಲಿ ಆಕ್ಸಿಮೀಟರ್ ಮನೆಯಲ್ಲಿರಲೇ ಬೇಕಾದ ಅಗತ್ಯ ಉಪಕರಣ. ಅಕ್ಸಿಮೀಟರ್ ರಕ್ತದಲ್ಲಿರುವ ಅಕ್ಸಿಜನ್ ಪ್ರಮಾಣವನ್ನು ಕೆಲವೇ ಸೆಕೆಂಡುಗಳಲ್ಲಿ ಹೇಳಿ ಬಿಡುತ್ತದೆ. ಇದರಿಂದ ಆಮ್ಲಜನಕದ ಮಟ್ಟದ ಮಾಹಿತಿ ಅತ್ಯಂತ ಸುಲಭದಲ್ಲಿ ಸಿಕ್ಕಿಬಿಡುತ್ತದೆ. ಇದರಿಂದ ಮನೆಯಲ್ಲಿದ್ದುಕೊಂಡೇ ನಿಮ್ಮ ಮತ್ತು ನಿಮ್ಮ ಪರಿವಾರದ ಆರೋಗ್ಯದ ಕಾಳಜಿ ಮಾಡಿಕೊಳ್ಳಬಹುದು.
ಶುಗರ್ ಇರುವವರಿಗೆ ಗ್ಲುಕೋಮೀಟರ್ ಇರಬೇಕು. ಇದರಿಂದ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಸುಲಭದಲ್ಲಿ ಪತ್ತೆ ಮಾಡಬಹುದು. ವೈದ್ಯರ ಸಲಹೆಯಂತೆ ಗ್ಲುಕೋಮೀಟರ್ ಖರೀದಿಸಬಹುದು.
ದೇಹದ ತಾಪಮಾನ ಅಳೆಯಲು ಬಯಸುವ ಅತ್ಯಂತ ಮುಖ್ಯ ಮೆಡಿಕಲ್ ಉಪಕರಣ ಇದು. ಮೈಗೆ ಮುಟ್ಟಿಸದೇ ಕೇವಲ ಇನ್ಫ್ರಾರೆಡ್ ಮೂಲಕವೇ ಇದು ದೇಹದ ತಾಪಮಾನ ಅಳೆಯುತ್ತದೆ. ವೈದ್ಯರ ಸಲಹೆಯಂತೆ ಈ ಉಪಕರಣದ ಉಪಯೋಗ ಪಡೆಯಬಹುದು.
ಇಸಿಜಿಗಾಗಿ ಇನ್ನು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಇಸಿಜಿ ಮಾನಿಟರ್ ಇದ್ದರೆ ಮನೆಯಲ್ಲಿದ್ದುಕೊಂಡೇ ಇಸಿಜಿ ರಿಪೋರ್ಟ್ ತೆಗಿಸಬಹುದು. ಈಗ, ಸ್ಮಾರ್ಟ್ ವಾಚ್್ ಗಳಲ್ಲಿಯೂ ನೀವು ಇಸಿಜಿ ನೋಡಬಹುದಾಗಿದೆ.