ಈ ಎಲೆಯನ್ನು ಕಿವುಚಿ ಮನೆಯ ಬಾಗಿಲು ಮತ್ತು ಕಿಟಕಿ ಬಳಿ ಇಡಿ: ಸೊಳ್ಳೆ, ನೊಣ, ಜಿರಳೆ, ಹಲ್ಲಿ ಯಾವುದೂ ಬರಲ್ಲ... ಅದರ ವಾಸನೆಗೇ ಓಡಿ ಹೋಗುತ್ತೆ
)
ಇದು ಮಳೆಗಾಲ. ಎಲ್ಲಿ ನೋಡಿದರೂ ಸೊಳ್ಳೆ, ಕೀಟಗಳ ಕಾಟ ಜಾಸ್ತಿ. ಇವುಗಳಿಂದ ಪಾರಾಗಲು ಹಲವು ವಿಧಾನಗಳನ್ನು ಅನುಸರಿಸುತ್ತೇವೆ. ಸೊಳ್ಳೆ ಬತ್ತಿ, ಲಿಕ್ವಿಡ್, ಇತ್ಯಾದಿ.. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಆದರೂ ಸೊಳ್ಳೆಗಳಿಂದ ನಮ್ಮನ್ನು ನಾವು ಸಂಪೂರ್ಣವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
)
ಇದಲ್ಲದೆ, ಈ ಸೊಳ್ಳೆ ನಿವಾರಕ ದ್ರವಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಅನೇಕ ಅಡ್ಡ ಪರಿಣಾಮಗಳಿವೆ ಎಂದು ಸಂಶೋಧನೆ ತೋರಿಸುತ್ತದೆ. ಇವುಗಳಿಂದ ಮಕ್ಕಳು ಮತ್ತು ದೊಡ್ಡವರಲ್ಲಿ ಉಸಿರಾಟದ ತೊಂದರೆಗಳು ಉಂಟಾಗುತ್ತವೆ ಎಂದು ಕಂಡುಬಂದಿದೆ. ಈ ರಾಸಾಯನಿಕಗಳಿಂದ ದೂರವಿರಲು ಮತ್ತು ನೈಸರ್ಗಿಕವಾಗಿ ಅವುಗಳನ್ನು ತೊಡೆದುಹಾಕಲು ಬಯಸುವುದಾದರೆ ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ.
)
ಇಂತಹ ಗಿಡಗಳನ್ನು ನೆಟ್ಟರೆ ಸುಲಭವಾಗಿ ಮನೆಯಿಂದ ಸೊಳ್ಳೆ ಮಾತ್ರವಲ್ಲದೆ, ನೊಣ, ಜಿರಲೆ, ಹಲ್ಲಿಗಳಂತಹ ಮಳೆಗಾಲದಲ್ಲಿ ಕಾಡುವ ಕೀಟಗಳಿಂದ ಮುಕ್ತಿ ಪಡೆಯಬಹುದು.
ಭಾರತದಲ್ಲಿ, ಚೆಂಡು ಹೂವಿನ ಗಿಡಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇನ್ನು ಈ ಹೂವಿನ ಗಿಡ ಮನೆಯಲ್ಲಿದ್ದರೆ ಅಥವಾ ಅದರ ಎಲೆಯನ್ನು ಕಿವುಚಿ ಮನೆಯ ಮುಂದೆ ಇಟ್ಟರೆ ಸಾಕು ಸೊಳ್ಳೆಯಾಗಲಿ ಹಲ್ಲಿಗಳಾಗಲಿ ಬರುವುದಿಲ್ಲ. ಇದಕ್ಕೆ ಕಾರಣ ಅದರ ಗಾಢ ವಾಸನೆ.
ಹೆಸರೇ ಹೇಳುವಂತೆ ಈ ಗಿಡದ ಎಲೆ ನಿಂಬೆಯನ್ನು ಹೋಲುವ ವಾಸನೆಯನ್ನು ಹೊಂದಿರುತ್ತದೆ. ಮನುಷ್ಯರಿಗೆ ಮೆಚ್ಚುವ ಈ ಗಿಡದ ವಾಸನೆ, ಕೀಟವಾಗಲಿ, ಹಾವುಗಳಿಗಾಗಲಿ ಇಷ್ಟವಾಗುವುದಿಲ್ಲ. ಇದೇ ಕಾರಣದಿಂದ ಇದನ್ನು ಮನೆಯ ಬಳಿ ನೆಟ್ಟರೆ ಕೀಟನಾಶಕವಾಗಿ ಕೆಲಸ ಮಾಡುತ್ತದೆ.
ತುಳಸಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ಗಿಡವಾಗಿ ಪೂಜೆ ಮಾಡಲಾಗುತ್ತದೆ. ಈ ಗಿಡಗಳನ್ನು ಮನೆಯ ಸುತ್ತ ಬೆಳೆಸುವುದರಿಂದ ಸೊಳ್ಳೆಗಳು ಬರುವುದಿಲ್ಲ.
ಕಿಟಕಿಗಳ ಬಳಿ ಮತ್ತು ಬಾಗಿಲಿನಲ್ಲಿ ಪುದೀನಾ ಸೊಪ್ಪನ್ನು ಕಿವುಚಿ ಇಡುವುದರಿಂದ ಸೊಳ್ಳೆಗಳು ಮತ್ತು ಕೀಟಗಳು ಬರುವುದಿಲ್ಲ. ಎಲ್ಲಿಯಾದರೂ ಸೊಳ್ಳೆ, ನೊಣ, ಕ್ರಿಮಿ ಕೀಟಗಳು ಕಂಡು ಬಂದರೆ ಪುದೀನಾ ರಸ ತೆಗೆದು ಅವುಗಳ ಮೇಲೆ ಸಿಂಪಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.