ಈ ವಸ್ತುವಿನ ಸಿಪ್ಪೆ ತೆಗೆದು ಮಲಗುವಾಗ ತಲೆ ಪಕ್ಕದಲ್ಲಿ ಇಟ್ಟುಕೊಳ್ಳಿ!ಸೊಳ್ಳೆ , ನೊಣ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ
ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ನುಸುಳಿ ಬರುವ ಸೊಳ್ಳೆಗಳ ಕಾಟವನ್ನು ನಿಯಂತ್ರಿಸಲು ಎಲೆಕ್ಟ್ರಿಕ್ ರಾಕೆಟ್,ಮೊಸ್ಕಿಟೊ ಕಾಯಿಲ್, ಸೊಳ್ಳೆ ಬತ್ತಿ ಎಲ್ಲವನ್ನೂ ಬಳಸಲಾಗುತ್ತದೆ.ಆದರೆ,ಅವುಗಳ ಮೇಲೆಯೇ ಸೊಳ್ಳೆಗಳು ಬಂದು ಕುಳಿತುಕೊಳ್ಳುವುದನ್ನು ಕೂಡಾ ನಾವು ಗಮನಿಸಿರುತ್ತೇವೆ.
ಒಂದು ವೇಳೆ ಈ ಪರಿಹಾರಗಳು ಸೊಳ್ಳೆಯನ್ನು ಓಡಿಸುವಲ್ಲಿ ಯಶಸ್ವಿಯಾದರೂ ಉಬ್ಬಸ, ಅಲರ್ಜಿ, ಕೆಮ್ಮು ಮುಂತಾದ ಸಮಸ್ಯೆಗಳಿಗೂ ನಾಂದಿ ಹಾಡುತ್ತದೆ. ಅದರಲ್ಲಿಯೂ ಮಕ್ಕಳಿದ್ದರೆ ಈ ಸಮಸ್ಯೆ ಇನ್ನೂ ಹೆಚ್ಚು.
ನಮ್ಮಲ್ಲಿ ಸೊಳ್ಳೆಗಳನ್ನು ನಿಯಂತ್ರಣಕ್ಕೆ ಹಿಂದಿನಿಂದಲೂ ಕೆಲ ಪರಿಹಾರಗಳನ್ನು ಅನುಸರಿಸಿಕೊಂಡು ಬರಲಾಗಿದೆ.ಇವುಗಳನ್ನು ಬಳಸುವುದರಿಂದ ಸೊಳ್ಳೆಗಳು ಮನೆಯಿಂದ ಹೊರ ಹೋಗುವುದು ಮಾತ್ರವಲ್ಲ, ಯಾವುದೇ ರೀತಿಯ ಅಡ್ಡ ಪರಿಣಾಮ ಕೂಡಾ ಇದರಿಂದ ಆಗುವುದಿಲ್ಲ.
ನಿಮ್ಮ ಕೊಠಡಿಯಲ್ಲಿರುವ ಸೊಳ್ಳೆಗಳನ್ನು ಓಡಿಸುವುದು ಬಹಳ ಸುಲಭ. ಇದಕ್ಕಾಗಿ ನಿಮ್ಮ ಬಳಿ ಬೆಳ್ಳುಳ್ಳಿ ಇದ್ದರೆ ಸಾಕು.ಕೇವಲ ಬೆಳ್ಳುಳ್ಳಿ ಬಳಕೆಯಿಂದಲೇ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
ಬೆಳ್ಳುಳ್ಳಿಯ ಸಿಪ್ಪೆ ತೆಗೆದು ನೀವು ಮಲಗುವ ಪಕ್ಕದಲ್ಲಿ ಇಟ್ಟು ಕೊಳ್ಳಿ. ಇದರ ವಾಸನೆಗೆ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ನಿಮ್ಮ ದೇಹದ ಮೇಲೆ ಬೆಳ್ಳುಳ್ಳಿ ರಸವನ್ನು ಹಚ್ಚಿದರೂ ಸೊಳ್ಳೆಗಳು ನಿಮ್ಮ ಬಳಿ ಬರುವುದಿಲ್ಲ.ಬೆಳ್ಳುಳ್ಳಿ ವಾಸನೆಯನ್ನು ಸೊಳ್ಳೆಗಳು ಸಹಿಸುವುದಿಲ್ಲ.ಹಾಗಾಗಿ ಅದು ಕೋಣೆಯೊಳಗೆ ನಿಲ್ಲುವುದೇ ಇಲ್ಲ.
ಇದಲ್ಲದೆ ಬೆಳ್ಳುಳ್ಳಿ, ಶೀತ, ಕೆಮ್ಮು, ಅಲರ್ಜಿ ಮುಂತಾದ ಅರೋಗ್ಯ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.