Vastu Tips: ಆರ್ಥಿಕ ಸಮಸ್ಯೆಯಿಂದ ಹೊರಬರಲು ಈ 5 ವಸ್ತುಗಳನ್ನು ದೇವರ ಮನೆಯಲ್ಲಿಡಿ
ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನಿಗೆ ನವಿಲು ಗರಿಗಳೆಂದರೆ ತುಂಬಾ ಪ್ರೀತಿ. ಹಾಗಾಗಿ ಇದನ್ನು ದೇವರ ಮನೆ ಅಥವಾ ಪೂಜಾ ಮಂದಿರದಲ್ಲಿ ಇಡುವುದನ್ನು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ನೀವು ನಿಮ್ಮ ಮನೆಯಲ್ಲಿರುವ ಪೂಜಾ ಕೋಣೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಕ್ಕಿ ಹರಿಯುತ್ತದೆ. ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ತಲೆದೂರುವುದಿಲ್ಲ. ಅಲ್ಲದೆ, ಧನಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ಪೂಜಾ ಮನೆಯಲ್ಲಿ ಗಂಗಾ ಜಲವನ್ನು ಇರಿಸುವುದನ್ನೂ ಕೂಡ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಮೂಲಕ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಗಂಗಾ ಜಲವನ್ನು ದೇವಾಲಯದ ಈಶಾನ್ಯ ಭಾಗದಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ. ಮನೆಯಲ್ಲಿ ಗಂಗಾ ಜಲವನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಜೊತೆಗೆ ಅಂತಹ ಮನೆಯಲ್ಲಿ ಶಾಂತಿ, ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ. ಆದರೆ ಗಂಗಾ ಜಲವನ್ನು ಎಂದಿಗೂ ಕತ್ತಲೆಯ ಕೋಣೆಯಲ್ಲಿ ಅಥವಾ ಗಾಢ ಮೂಲೆಯಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ.
ಲಕ್ಷ್ಮಿಯ (Lakshmi) ಸಂಕೇತವೆಂದು ಪರಿಗಣಿಸಲಾಗಿರುವುದರಿಂದ ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಶಂಖ ಇರುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ನೀವು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಶಂಖ ಇರಿಸಿ. ಮನೆಯಲ್ಲಿ ಶಂಖವನ್ನು ಇಡುವುದರಿಂದ, ಮನೆಯ ವಾತಾವರಣವು ಸಂತೋಷದಿಂದ ಮತ್ತು ಶಾಂತಿಯುತವಾಗಿ ಉಳಿಯುತ್ತದೆ, ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲಾಗುತ್ತದೆ. ಆದರೆ ಪೂಜಾ ಮನೆಯಲ್ಲಿ ಕೇವಲ ಒಂದು ಶಂಖವನ್ನು ಇಡಬೇಕು. ಒಂದಕ್ಕಿಂತ ಹೆಚ್ಚು ಶಂಖಗಳನ್ನು ಹೊಂದಿರುವುದು ಅಶುಭವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ - Vinayaki Devi Temple: ಶ್ರೀಗಣೇಶನ ಸ್ತ್ರೀ ಅವತಾರ 'ವಿನಾಯಕಿ' ಬಗ್ಗೆ ನಿಮಗೆಷ್ಟು ತಿಳಿದಿದೆ?
ಶಾಲಿಗ್ರಾಮ ವಿಷ್ಣುವಿನ ಒಂದು ರೂಪವಾಗಿದೆ. ಆದ್ದರಿಂದ ಶಾಲಿಗ್ರಾಮವನ್ನು ಪೂಜಿಸುವ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ, ಮನೆಯ ದೇವರ ಕೋಣೆಯಲ್ಲಿ ಶಾಲಿಗ್ರಾಮ್ ಇರಿಸಿ ಮತ್ತು ತುಳಸಿ ಎಲೆಗಳನ್ನು ನೀರಿನೊಂದಿಗೆ ಅದಕ್ಕೆ ಅರ್ಪಿಸಿ. ಇದರಿಂದಶ್ರೀಹರಿ ವಿಷ್ಣು ಸಂತಸಗೊಂಡು ಲಕ್ಷ್ಮಿ ದೇವಿಯೂ ಆಶೀರ್ವದಿಸಿದ್ದಾಳೆ ಎಂದು ನಂಬಲಾಗಿದೆ. ಶಾಲಿಗ್ರಾಮ್ ಅನ್ನು ಸಾತ್ವಿಕದ ಸಂಕೇತವೆಂದು ಪರಿಗಣಿಸಲಾಗಿದೆ. ನೆನಪಿಡಿ: ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇರಿಸುವ ಮೊದಲು ನಿಮ್ಮ ಮನೆಯ ಹಿರಿಯ ಸಲಹೆ ಪಡೆಯಿರಿ.
ಪೂಜೆಯ ಸಮಯದಲ್ಲಿ ಹಸುವಿನ ಶುದ್ಧ ದೇಸಿ ತುಪ್ಪ (Ghee) ವನ್ನು ಬಳಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೆಂದರೆ ಹಿಂದೂ ಧರ್ಮದಲ್ಲಿ ಹಸುವನ್ನು ತಾಯಿಯಂತೆ ಪೂಜ್ಯರೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮನೆಯ ದೇವಾಲಯದಲ್ಲಿ ಯಾವಾಗಲೂ ಹಸುವಿನ ತುಪ್ಪ ಇರಬೇಕು. ಇದರಿಂದ ದೇವ, ದೇವತೆಗಳು ಸಂತುಷ್ಟಗೊಂಡು ನಿಮ್ಮನ್ನು ಆಶೀರ್ವದಿಸುತ್ತಾರೆ. ನಿಮ್ಮ ಮನೆಯಲ್ಲಿ ಎಂದಿಗೂ ಆರ್ಥಿಕ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಹೇಳಲಾಗುತ್ತದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)