ತುಳಸಿ ಗಿಡಕ್ಕೆ ಪೂಜೆ ಮಾಡುವ ಮುಂಚೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ! ಇಲ್ಲವಾದಲ್ಲಿ ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ !

Mon, 16 Sep 2024-10:53 am,

ತುಳಸಿ ಗಿಡವನ್ನು ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ.  ಭಗವಾನ್ ವಿಷ್ಣುವು ಲಕ್ಷ್ಮಿ ದೇವಿಯ ಜೊತೆಗೆ ತುಳಸಿಯಲ್ಲಿ ನೆಲೆಸಿದ್ದಾನೆ ಎನ್ನುವ ನಂಬಿಕೆ  ಇದೆ. 

ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳಲ್ಲಿ ತುಳಸಿ ಗಿಡ ಅತ್ಯಂತ ಪವಿತ್ರವಾದದ್ದು. ಲಕ್ಷ್ಮಿ ದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ.  ತುಳಸಿ ಗಿಡದ ನಿಯಮಿತ ಪೂಜೆಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.

ಶ್ರೀ ಹರಿಯ ಪೂಜೆ ತುಳಸಿ ಇಲ್ಲದೆ ಅಪೂರ್ಣ ಎಂದು ಪರಿಗಣಿಸಲಾಗುತ್ತದೆ.

ಆಯುರ್ವೇದದಲ್ಲಿ ಕೂಡ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ಇದನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಆದರೆ ತುಳಸಿ ಗಿಡಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾವು ತಿಳಿದೋ ತಿಳಿಯದೆಯೋ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತೇವೆ.

ನಾವು ಮಾಡುವ ಈ ಸಣ್ಣ ತಪ್ಪುಗಳಿಂದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳ್ಳುತ್ತಾಳೆ. ತುಳಸಿ ಗಿಡದಲ್ಲಿ ಎಲೆಗಳನ್ನು ಕೀಳುವುದು ಒಳ್ಳೆಯದ್ದಲ್ಲ, ಈ ರೀತಿ ಮಾಡುವುದರಿಂದ ಶೀಘ್ರವೇ ಆ ವ್ಯಕ್ತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾನೆ. 

ಏಕಾದಶಿಯಂದು ತುಳಸಿ ಎಲೆಗಳನ್ನು ಕೀಳಬೇಡಿ, ವಾಸ್ತವವಾಗಿ, ಏಕಾದಶಿಯಂದು ತುಳಸಿ ಇಲ್ಲದೆ ಪೂಜೆಯನ್ನು ಸಂಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಈ ದಿನ ತುಳಸಿ ಎಲೆಗಳನ್ನು ಕೀಳುವ ಬದಲು ಒಂದು ದಿನ ಮುಂಚಿತವಾಗಿ  ಎಂದರೆ ದಶಮಿ ತಿಥಿಯಂದು ಎಲೆಗಳನ್ನು ಕೀಳುವುದು ಉತ್ತಮ.

ಭಾನುವಾರ ಆಗಲಿ ಚಂದ್ರ ಅಥವಾ ಸೂರ್ಯಗ್ರಹಣದಂದು ತುಳಸಿ ಎಲೆಗಳನ್ನು ಕೀಳಬಾರದು, ಈ ದಿನದಂದು ತುಳಸಿ ಎಲೆಗಳನ್ನು ಕೀಳುವುದರಿಂದ ಮನೆಯಲ್ಲಿ ದುರದೃಷ್ಟ ಎದುರಾಗುತ್ತದೆ.   

ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಲೇಬೇಡಿ, ತುಳಸಿ ಎಲೆಗಳನ್ನು ಕೀಳುವಾಗ ಮೊದಲು ಕೈಮುಗಿದು ನಮಸ್ಕಾರ ಮಾಡಿ. ಅಲ್ಲದೆ, ಉಗುರುಗಳ ಸಹಾಯದಿಂದ ತುಳಸಿ ಎಲೆಗಳನ್ನು ಕೀಳುವ ತಪ್ಪು ಮಾಡಲೇಬೇಡಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link