ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ಯಾ? ನಿಮ್ಮ ಮನೆ ಸುತ್ತ ಇರಲಿ ಈ ಸಸ್ಯಗಳು
ಮಳೆಗಾಲದ ಮೋಜು ಒಂದೆಡೆಯಾದ, ಈ ಋತುವಿನಲ್ಲಿ ಸೊಳ್ಳೆಗಳು ದೊಡ್ಡ ಸಮಸ್ಯೆಯಾಗಿಯೇ ಕಾಡುತ್ತವೆ. ಇದರಿಂದ ಹಲವು ರೋಗಗಳು ಕೂಡ ಬಾಧಿಸಬಹುದು. ಆದರೆ, ನಿಮ್ಮ ಮನೆಯ ಸುತ್ತಲೂ ಕೆಲವು ಸಸ್ಯಗಳನ್ನು ನೆಡುವುದರಿಂದ ಸೊಳ್ಳೆಗಳ ಸಮಸ್ಯೆಗೆ ನೈಸರ್ಗಿಕವಾಗಿ ಪರಿಹಾರ ಪಡೆಯಬಹುದು. ಅಂತಹ ಸಸ್ಯಗಳೆಂದರೆ...
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಸಸ್ಯವು ನೈಸರ್ಗಿಕ ಕೀಟ ನಿವಾರಕ ಸಸ್ಯವೂ ಹೌದು. ಮನೆಯಲ್ಲಿ ತುಳಸಿ ಸಸ್ಯವಿದ್ದರೆ ನೊಣ, ಸೊಳ್ಳೆಗಳ ಕಾಟದಿಂದ ಕೊಂಚ ಪರಿಹಾರ ಪಡೆಯಬಹುದು.
ಆಹಾರದ ಸ್ವಾದವನ್ನು ಹೆಚ್ಚಿಸಬಲ್ಲ ಪುದೀನ ಆರೋಗ್ಯಕ್ಕೂ ಹಲವು ಪ್ರಯೋಜನಗಲಾನು ನೀಡುತ್ತದೆ. ಅಷ್ಟೇ ಅಲ್ಲ, ಪುದೀನ ಎಲೆಗಳ ಬಲವಾದ ಪರಿಮಳಕ್ಕೆ ಸೊಳ್ಳೆಗಳನ್ನು ಕೂಡ ಓಡಿಸುವ ಶಕ್ತಿಯಿದೆ.
ಸಾಮಾನ್ಯವಾಗಿ ಅಲಂಕಾರಗಳಿಗಾಗಿ ಹೆಚ್ಚಾಗಿ ಬಳಸಲ್ಪಡುವ ಚೆಂಡು ಹೂವಿನ ಗಿಡದಲ್ಲಿ ಪೈರೆಥ್ರಮ್ ಎಂಬ ಅಂಶವಿರುತ್ತದೆ. ಇದು ನೈಸರ್ಗಿಕ ಕೀಟ ನಿವಾರಕವಾಗಿದೆ.
ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲಿನಲ್ಲಿರುವ ಸಿಟ್ರೊನೆಲ್ಲಾ ಅತ್ಯುತ್ತಮ ಕೀಟ ನಿವಾರಕ. ಹಾಗಾಗಿ, ಸೊಳ್ಳೆಗಳಿಂದ ಪರಿಹಾರಕ್ಕಾಗಿ ಮನೆಯ ಮುಂದೆ ನಿಂಬೆ ಹುಲ್ಲನ್ನು ತಪ್ಪದೇ ಬೆಳೆಸಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.