Portable AC: ಬೇಸಿಗೆಯಲ್ಲಿ ಪೋರ್ಟಬಲ್ ಎಸಿ ಖರೀದಿಸುವ ಮೊದಲು ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ
ನೀವು ಈ ಬೇಸಿಗೆಯಲ್ಲಿ ಪೋರ್ಟಬಲ್ ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಹೌದು, ಎಂದಾರೆ, ಪೋರ್ಟಬಲ್ ಎಸಿ ಖರೀದಿಸುವ ಮೊದಲು ಐದು ಪ್ರಮುಖ ವಿಚಾರಗಳ ಬಗ್ಗೆ ವಿಶೇಷ ಗಮನ ವಹಿಸಬೇಕು ಅವುಗಳೆಂದರೆ...
ಪೋರ್ಟಬಲ್ ಎಸಿಗಳು ಸಾಮಾನ್ಯ ಎಸಿಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿರುತ್ತದೆ. ನೀವು ಯಾವುದೇ ಪೋರ್ಟಬಲ್ ಎಸಿಯನ್ನು ಖರೀದಿಸಿ, ಆದರೆ ಇದಕ್ಕೂ ಮೊದಲು ಆನ್‌ಲೈನ್ ವಿಮರ್ಶೆಗಳನ್ನು ಓದುವುದು ಹಾಗೂ ನೀವು ಖರೀದಿಸಲು ಬಯಸುವ ಪೋರ್ಟಬಲ್ ಎಸಿಯನ್ನು ವಿಭಿನ್ನ ಮಾದರಿಗಳಿಗೆ ಹೋಲಿಕೆ ಮಾಡುವುದು ತುಂಬಾ ಅಗತ್ಯ. ಕೆಲವು ಪೋರ್ಟಬಲ್ ಎಸಿಗಳು ರಿಮೋಟ್ ಕಂಟ್ರೋಲ್, ಟೈಮರ್ ಮತ್ತು ಹೀಟಿಂಗ್ ಫಂಕ್ಷನ್‌ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿರುತ್ತವೆ.
ಎಸಿ ಖರೀದಿಸುವಾಗ ಮಾತ್ರವಲ್ಲ, ಎಸಿ ಬಳಸುವಾಗಲೂ ಕೂಡ ನೀವು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಎಸಿ ದೀರ್ಘಾವಧಿಯವರೆಗೆ ಬಾಳಿಕೆ ಬರುತ್ತದೆ. ಯಾವುದೇ ಎಸಿ/ ಪೋರ್ಟಬಲ್ ಎಸಿ ಬಳಸುವಾಗ ನೀವು ಅದರಲ್ಲಿ ನೀಡಿರುವ ಸುರಕ್ಷತಾ ಸೂಚನೆಗಳನ್ನು ಗಮನವಿಟ್ಟು ಓದಿ, ಜೊತೆಗೆ ಎಸಿ ಬಳಕೆ ಸಂದರ್ಭದಲ್ಲಿ ಅವುಗಳನ್ನು ತಪ್ಪದೇ ಪಾಲಿಸಿ.
ಪೋರ್ಟಬಲ್ ಎಸಿ ಬಳಸುವಾಗ, ಕೋಣೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಿ. ಅಷ್ಟೇ ಅಲ್ಲದೆ, ಪೋರ್ಟಬಲ್ ಎಸಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಟ್ಟ ಗಮನಹರಿಸಿ.
ಪೋರ್ಟಬಲ್ ಎಸಿಯನ್ನು ಕಿಟಕಿ ಅಥವಾ ಬಾಗಿಲಿನ ಬಳಿ ಇಡುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಬಿಸಿ ಗಾಳಿ ಸುಲಭವಾಗಿ ಹೊರಹೋಗುತ್ತದೆ.
ಪೋರ್ಟಬಲ್ ಎಸಿ ಸಾಮಾನ್ಯ ಎಸಿಗಿಂತ ಹೆಚ್ಚು ವಿದ್ಯುತ್ ಬಳಸುತ್ತದೆ.
ಪೋರ್ಟಬಲ್ ಎಸಿಗಳು ಸಣ್ಣ ಕೋಣೆಗಳಿಗೆ ಎಂದರೆ 100 ಚದರ ಅಡಿಗಳವರೆಗಿನ ಕೊಠಡಿಗಳಿಗೆ ಉತ್ತಮವಾಗಿದೆ. ದೊಡ್ಡ ಕೋಣೆಗಳಿಗೆ ಇವು ಸೂಕ್ತವಲ್ಲ.
ಪೋರ್ಟಬಲ್ ಎಸಿಯಿಂದ ಹೊರಬರುವ ನೀರನ್ನು ನಿಯಮಿತವಾಗಿ ಖಾಲಿ ಮಾಡಿ. ಇಲ್ಲದಿದ್ದರೆ, ಇದರಲ್ಲಿ ಸೊಳ್ಳೆ ಮುತ್ತಬಹುದು. ಇಲ್ಲವೇ, ಸೋಂಕುಗಳು ಹರಡಲು ಕೂಡ ಕಾರಣವಾಗಬಹುದು.