Mutual Fund Investment: ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಈ ವಿಷಯ ನೆನಪಿರಲಿ
ಮ್ಯೂಚುವಲ್ ಫಂಡ್ ವೃತ್ತಿಪರವಾಗಿ ನಿರ್ವಹಿಸಲ್ಪಡುವ ಹೂಡಿಕೆಯ ಒಂದು ಸೂತ್ರ. ಇಲ್ಲಿ ವಿವಿಧ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಷೇರುಗಳು, ಸ್ಥಿರ ಆದಾಯದ ಸರ್ಕಾರಿ ಯೋಜನೆಗಳು ಮತ್ತು ಇವೆರಡಲ್ಲೂ ಹೂಡಿಕೆ ಮಾಡಬಹುದು. ಈಕ್ವಿಟಿ ಮತ್ತು ಇಕ್ವಿಟಿ-ಸಂಬಂಧಿತ ಹೂಡಿಕೆ, ಸರ್ಕಾರ ಮತ್ತು ಕಾರ್ಪೊರೇಟ್ ಬಾಂಡ್‌ಗಳು, ಹಣದ ಮಾರುಕಟ್ಟೆ, ಚಿನ್ನ ಮತ್ತು ರಿಯಲ್ ಎಸ್ಟೇಟ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಮ್ಯೂಚುಯಲ್ ಫಂಡ್‌ಗಳನ್ನು ನೀವು ಕಾಣಬಹುದು. ಫಂಡ್ ಮ್ಯಾನೇಜರ್ ಇದನ್ನು ನಿರ್ವಹಿಸುತ್ತಾರೆ ಮತ್ತು ಸಂಶೋಧಕರ ತಂಡವು ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿ ನಿಮ್ಮ ಹೂಡಿಕೆಗೆ ಉತ್ತಮ ಲಾಭ ನೀಡುವಂತೆ ಮಾಡುತ್ತಾರೆ.
ಯಾವುದೇ ಮ್ಯೂಚುವಲ್ ಫಂಡ್‍ನಲ್ಲಿ ಹಣ ಹೂಡಿಕೆ ಮಾಡುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. Lower expense ratio ಹೊಂದಿರುವ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆಮಾಡಬೇಕು. ಇದು ಮ್ಯೂಚುವಲ್ ಫಂಡ್ ನಿರ್ವಹಣೆಯ ವೆಚ್ಚವಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ನೀವು ಮ್ಯೂಚುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡುವಾಗ ತೆರಿಗೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈಕ್ವಿಟಿ, ಸಾಲ ಮತ್ತು ಸಮತೋಲಿತ ಮ್ಯೂಚುವಲ್ ಫಂಡ್ ಯೋಜನೆಗಳ ತೆರಿಗೆಯ ಬಗ್ಗೆ ಗಮನಿಸಿ. ಅದಕ್ಕೆ ಅನುಗುಣವಾಗಿ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡಿ.
ಹೂಡಿಕೆಯ ಗುಣಮಟ್ಟ ನಿರ್ಧರಿಸಲು ನೀವು ಮ್ಯೂಚುವಲ್ ಫಂಡ್‌ನ ಪೋರ್ಟ್‌ಫೋಲಿಯೊ ಪರಿಶೀಲಿಸಬೇಕು. ಅಲ್ಲದೆ ಆ ಮ್ಯೂಚುವಲ್ ಫಂಡ್‌ನಲ್ಲಿ ಯಾವ ಕಂಪನಿಗಳನ್ನು ಸೇರಿಸಲಾಗಿದೆ ಎಂಬುದನ್ನು ಸಹ ನೋಡಬೇಕು. ನಿಮ್ಮ ಹಣವನ್ನು ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸುಲಭವಾಗುತ್ತದೆ.
ಮ್ಯೂಚುವಲ್ ಫಂಡ್‌ಗಳ ಮೇಲೆ ಸಾಲ ಪಡೆಯುವ ಸೌಲಭ್ಯವನ್ನು ನೀವು ಹೊಂದಿರಬೇಕು. ಇದರೊಂದಿಗೆ ಮ್ಯೂಚುವಲ್ ಫಂಡ್‌ನ exit loadನ್ನು ಪರಿಶೀಲಿಸಿ. ನೀವು ಹೂಡಿಕೆಯಿಂದ ನಿರ್ಗಮಿಸುವಾಗ AMC ಮೂಲಕ ವಿಧಿಸಲಾಗುವ ಶುಲ್ಕವನ್ನು ಸಹ ತಿಳಿದುಕೊಳ್ಳಿರಿ.