Tulsi Watering Niyam: ಲಕ್ಷ್ಮಿ ದಯೆಗಾಗಿ ತುಳಸಿಗೆ ನೀರುಣಿಸುವಾಗ ಈ ವಿಷಯಗಳು ನೆನಪಿರಲಿ

Thu, 17 Aug 2023-8:10 am,

ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ಅತ್ಯಂತ ಪವಿತ್ರ ಸಸ್ಯ ತುಳಸಿ. ಔಷಧೀಯ ಗುಣಗಳ ಆಗರವಾಗಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ಅಧಿದೇವತೆಯಾದ ಮಾತೆ ಲಕ್ಷ್ಮಿ ನೆಲೆಸಿರುತ್ತಾಳೆ. ಮಾತ್ರವಲ್ಲ, ತುಳಸಿ ಮಾತೆಗೆ ನೀರುಣಿಸುವುದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂದು ನಂಬಲಾಗಿದೆ. ಲಕ್ಷ್ಮಿ ದೇವಿ ಮತ್ತು ಭಗವಾನ್ ವಿಷ್ಣುವಿನ ಆಶೀರ್ವಾದಕ್ಕಾಗಿ ತುಳಸಿಗೆ ನೀರುಣಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಕೂಡ ಬಹಳ ಮುಖ್ಯ. ಆ ನಿಯಮಗಳು ಯಾವುವು ತಿಳಿಯೋಣ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯಕ್ಕೆ ನೀರುಣಿಸುವಾಗ ನೀವು ಶುಚಿಯಾಗಿರಬೇಕು. ಮಾತ್ರವಲ್ಲ, ಆಹಾರ ಸೇವಿಸಿರಬಾರದು. ತುಳಸಿ ಸಸ್ಯಕ್ಕೆ ನೀರುಣಿಸಿದ ಬಲಿಕವಷ್ಟೇ ಆಹಾರ ತೆಗೆದುಕೊಳ್ಳಿ. 

ತುಳಸಿ ಸಸ್ಯಕ್ಕೆ ನೀರುಣಿಸಲು ಸರಿಯಾದ ಸಮಯ ಸೂರ್ಯೋದಯದಿಂದ 2-3 ಗಂಟೆಗಳ ನಂತರ. ಈ ಅವಧಿಯಲ್ಲಿ ಮಾತ್ರ ತುಳಸಿಗೆ ನೀರನ್ನು ಅರ್ಪಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. 

ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ಅಪ್ಪಿತಪ್ಪಿಯೂ  ನೀರುಣಿಸಬಾರದು. ಈ ದಿನಗಳಲ್ಲಿ ತುಳಸಿ ಭಗವಾನ್ ವಿಷ್ಣುವಿಗಾಗಿ ಉಪವಾಸ ಮಾಡುತ್ತಾಳೆ. ಹಾಗಾಗಿ, ಈ ದಿನ ನೀರು ಹಾಕುವುದರಿಂದ ತುಳಸಿಯ ಉಪವಾಸಕ್ಕೆ ಭಂಗ ತಂದಂತೆ ಎಂದು ಹೇಳಲಾಗುತ್ತದೆ. 

ಸ್ನಾನ ಮಾಡುವ ಮೊದಲು ಅಥವಾ ಅಶುದ್ಧ ಸ್ಥಿತಿಯಲ್ಲಿ ಎಂದಿಗೂ ಕೂಡ ತುಳಸಿಗೆ ನೀರು ಹಾಕಬಾರದು. ಈ ರೀತಿ ಮಾಡುವುದರಿಂದ ಪೂಜೆಯ ಫಲ ಸಿಗುವುದಿಲ್ಲ.

ನಂಬಿಕೆಗಳ ಪ್ರಕಾರ, ಮಹಿಳೆಯರು ತುಳಸಿಯನ್ನು ಪೂಜಿಸುವಾಗ ತಮ್ಮ ಕೂದಲನ್ನು ತೆರೆದಿಡಬಾರದು. ತುಳಸಿಗೆ ನೀರು ಹಾಕುವಾಗ, ಇಲ್ಲವೇ ಪೂಜೆ ಮಾಡುವಾಗ ಮಹಿಳೆಯರು ಕೂದಲನ್ನು ಕಟ್ಟಿ. 

ತುಳಸಿಗೆ ನೀರು ಹಾಕುವಾಗ, ತುಳಸಿಯನ್ನು ಪೂಜಿಸುವಾಗ ತಪ್ಪದೆ ತುಳಸಿ ಮಂತ್ರ "ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ" ಎಂಬ ಮಂತ್ರವನ್ನು ಪಠಿಸಿ. ಇದರಿಂದ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link