ಈ ಪ್ರಾಣಿ ಪಕ್ಷಿಯ ಮೂರ್ತಿಯನ್ನು ಮನೆಯಲ್ಲಿಟ್ಟರೆ ರಾತ್ರೋರಾತ್ರಿ ಬದಲಾಗುವುದು ಮನೆಯ ಮಕ್ಕಳ ಭವಿಷ್ಯ .!
ಮನೆಯಲ್ಲಿ ಕುದುರೆ ವಿಗ್ರಹವನ್ನು ಇಡುವುದು ಮಂಗಳಕರ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೆ, ಮನೆಯಲ್ಲಿ ಓಡುವ ಕುದುರೆಯ ಚಿತ್ರವನ್ನು ಹಾಕುವಂತೆ ಸಲಹೆ ನೀಡಲಾಗುತ್ತದೆ. ಕುದುರೆಯನ್ನು ಪ್ರಗತಿ, ಯಶಸ್ಸು ಮತ್ತು ಕಠಿಣ ಪರಿಶ್ರಮದ ಸಂಕೇತವೆಂದು ಹೇಳಲಾಗುತ್ತದೆ. ಅದನ್ನು ಮನೆಯಲ್ಲಿ ಇಡುವುದರಿಂದ, ಒಬ್ಬ ವ್ಯಕ್ತಿಯು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ.
ವಾಸ್ತು ಶಾಸ್ತ್ರ ಮತ್ತು ಚೈನೀಸ್ ವಾಸ್ತು ಫೆಂಗ್‌ಶುಯಿಯಲ್ಲಿ ಮೀನುಗಳನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು, ಮೀನಿನ ಆಕಾರದ ಮೂರ್ತಿಯನ್ನು ಇರಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಮೀನಿನ ಮೂರ್ತಿಯ ಬದಲು ಮೀನಿನ ಅಕ್ವೇರಿಯಂ ಇಟ್ಟುಕೊಂಡರೂ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಮನೆಯಲ್ಲಿ ಆನೆಯ ಪ್ರತಿಮೆಯನ್ನು ಇ ಟ್ಟರೆ ಶುಭ ಫಲ ನೀಡುತ್ತದೆ ಎಂದು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ, ಆನೆ ಮತ್ತು ಲಕ್ಷ್ಮೀ ದೇವಿಗೆ ಸಂಬಂಧವಿದೆ ಎಂದು ಹೇಳಲಾಗಿದೆ. ಎಲ್ಲಿ ಆನೆ ಇರುತ್ತದೋ ಅಲ್ಲಿ ತಾಯಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಆನೆಯನ್ನು ಸಂಪತ್ತು ಮತ್ತು ಶ್ರೀಮಂತಿಕೆಯ ಸೂಚಕ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ಹಸುವನ್ನು ಪೂಜನೀಯ ಎಂದು ಹೇಳಲಾಗುತ್ತದೆ. ಹಸುವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಗೋವಿನ ವಿಗ್ರಹವನ್ನು ಇಡುವುದು ಶುಭ ಹಾಗೂ ಫಲಪ್ರದ. ಇದರಿಂದ ಮನೆಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ.
ಮನೆಯ ವಾಸ್ತು ದೋಷಗಳು ಕುಟುಂಬದಲ್ಲಿನ ಮಕ್ಕಳ ಪ್ರಗತಿ ಮತ್ತು ವೃತ್ತಿಜೀವನಕ್ಕೆ ಅಡ್ಡಿಯಾಗುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಪಾಲಕರು ಕೂಡಾ ತಮ್ಮ ಮಕ್ಕಳ ಸಂತೋಷಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳ ಕೋಣೆಯಲ್ಲಿ ಗಿಳಿಯ ವಿಗ್ರಹವನ್ನು ಇರಿಸುವ ಮೂಲಕ, ಅವರ ಮನಸ್ಸು ಓದು ಬರವಣಿಗೆಯಲ್ಲಿ ಹೆಚ್ಚಾಗಿ ತೊಡಗಲು ಆರಂಭಿಸುತ್ತದೆ. ಅಲ್ಲದೆ ಅವರ ಶಿಕ್ಷಣದಲ್ಲಿ ಹೆಚ್ಚಿನ ಏಕಾಗ್ರತೆ ಮೂಡುತ್ತದೆ.
ಹಿಂದೂ ಧರ್ಮದಲ್ಲಿ ಗಣೇಶನ ಆರಾಧನೆಗೆ ಬಹಳ ಮಹತ್ವವಿದೆ. ಗಣೇಶನಿಗೆ ಯಾವಾಗಲೂ ಮೊದಲ ಪೂಜೆ. ಮನೆಯಲ್ಲಿ ಗಣೇಶನ ವಿಗ್ರಹವನ್ನು ಇಡುವುದರಿಂದ ವ್ಯಕ್ತಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಕೆಲಸವೂ ಸುಗಮವಾಗಿ ನೆರವೇರುತ್ತದೆ. ವಾಸ್ತುತಜ್ಞರ ಪ್ರಕಾರ, ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದನ್ನು ಹೋಗಲಾಡಿಸಲು ಮನೆಯ ಮುಖ್ಯ ದ್ವಾರದಲ್ಲಿ ಗಣೇಶನ ವಿಗ್ರಹವನ್ನು ಇರಿಸಿ.