ಯಾವುದೇ ಕಾರಣಕ್ಕೂ ತುಳಸಿ ಕಟ್ಟೆಯ ಮುಂದೆ ಈ ವಸ್ತುಗಳನ್ನು ಇಡಬೇಡಿ..! ಸಮಸ್ಯೆ.. ಸಾಲ ನಿಮ್ಮನ್ನು ಸುತ್ತುವರೆಯುತ್ತದೆ!!
Tulsi Plant: ತುಳಸಿ ಕಟ್ಟೆಯನ್ನು ಸಾಮಾನ್ಯವಾಗಿ ಹೆಚ್ಚು ಬಿಸಿಲು ಬೀಳುವ ಸ್ಥಳದಲ್ಲಿ ಇರಿಸಲಾಗುತ್ತದೆ.
ತುಳಸಿ ಗಿಡಕ್ಕೆ ನೀರು ಎಷ್ಟು ಮುಖ್ಯವೋ, ಬಿಸಿಲು ಕೂಡ ಅಷ್ಟೆ ಮುಖ್ಯ ಅದ್ದರಿಂದ ತುಳಸಿ ಗಿಡವನ್ನು ಬಿಸಿಲಿನಲ್ಲಿ ಇಡುವುದು ಸೂಕ್ತ.
ತುಳಸಿ ಕಟ್ಟೆಯ ಬಳಿ ಹೆಚ್ಚಿನ ಬಿಸಿಲು ಬೀಳುವ ಕಾರಣ ತುಳಸಿ ಕಟ್ಟೆಯ ಬಳಿ ಹೆಚ್ಚಿನ ಜನರು ಹಲವಾರು ವಸ್ತುಗಳನ್ನು ಒಣಹಾಕುವ ಅಭ್ಯಾಸವನ್ನು ಹೊಂದಿರುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಸುತ್ತ ಮುತ್ತ ಇಂತಹ ವಸ್ತುಗಳನ್ನು ಇಡುವುದರಿಂದ ನಿಮ್ಮ ಜೀವನದಲ್ಲಿ ಸಮಸ್ಯೆಗಲು ಎದುರಾಗುತ್ತವೆಯಂತೆ.
ತುಳಸಿ ಕಟ್ಟೆಯ ಮುಂದೆ ಯಾವುದೇ ಕಾರಣಕ್ಕೂ ಖಾಲಿ ತಟ್ಟೆ ಹಾಗೂ ಖಾಲಿ ಬಟ್ಟಲನ್ನು ಇಡಬಾರದು, ಹೀಗೆ ಇದನ್ನು ಇಡುವುದರಿಂದ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾರಂತೆ.
ತುಳಸಿ ಗಿಡಕ್ಕೆ ಸಾಮಾನ್ಯವಾಗಿ ದೀಪವನ್ನು ಇಟ್ಟು ಪೂಜೆ ಮಾಡಲಾಗುತ್ತದೆ, ಆದರೆ ಹಲವರು ತುಳಸಿ ಗಿಡದ ಬಲಿ ಇಟ್ಟ ದೀಪ ಉರಿದು ಬತ್ತಿ ಹೋದ ಮೇಲೂ ಅದನ್ನು ಅಲ್ಲೆ ಬಿಟ್ಟಿರುತ್ತಾರೆ, ಅದನ್ನು ಹಾಗೆ ಬಿಡುವುದು ತುಂಬಾ ತಪ್ಪು.
ತುಳಸಿ ಕಟ್ಟೆಯ ಆಸುಪಾಸಿನಲ್ಲಿ ಹಗ್ಗದ ಮೇಲೆ ಹಲವರು ತಮ್ಮ ಬಟ್ಟೆಗಳನ್ನು ಒಗೆದು ಒಣಗಲು ಹಾಕುತ್ತಾರೆ, ಈ ರೀತಿ ಒಣಗಲು ಹಾಕಿದ ಬಟ್ಟೆಗಳು ತುಳಸಿ ಕಟ್ಟೆಗೆ ತಾಕುವುದು ಸೂಕ್ತವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಇನ್ನೂ, ಕೆಲವರು ಪೂಜಾ ಕೊಠಡಿಯ ಕಳಸದಲ್ಲಿ ದೇವರ ಮುಂದೆ ಇಟ್ಟ ನೀರನ್ನು ತಂದು ತುಳಸಿ ಕಟ್ಟೆಗೆ ಸುರಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ ಮಾಡುವುದು ತುಂಬಾ ತಪ್ಪು ಎನ್ನುತ್ತದೆ ವಾಸ್ತು ಶಾಸ್ತ್ರ.