ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್ ಇಲ್ಲಿವೆ ನೋಡಿ
ನಟಿ ಕೀರ್ತಿ ಸುರೇಶ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್ ಇಲ್ಲಿವೆ ನೋಡಿ..
ನಟಿ ಕೀರ್ತಿ ಸುರೇಶ್ ವಿವಾಹ ಕಾರ್ಯಕ್ರಮ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿದೆ.
ಬಾಲನಟಿಯಾಗಿ ಖ್ಯಾತಿ ಗಳಿಸಿ ಇದೀಗ ಬಹುಭಾಷಾ ನಾಯಕಿಯಾಗಿರುವ ಕೀರ್ತಿ ಸುರೇಶ್ ಇಂದು ತಮ್ಮ ಮೆಚ್ಚಿನ ಹಡುಗನ ಜೊತೆ ಸಪ್ತಪದಿ ತುಳಿದಿದ್ದಾರೆ.
ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರ ಜೊತ ಮದುವೆ ಆಗಿದ್ದಾರೆ. 15 ವರ್ಷಗಳ ಪ್ರೀತಿಗೆ ಇಂದು ಫಲ ದೊರೆತಿದೆ.
ಕೀರ್ತಿ ಸುರೇಶ್ ಮತ್ತು ಆಂಟನಿ ತಟ್ಟಿಲ್ ಮದುವೆಯಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದಾರೆ.
ಕೀರ್ತಿ ಸುರೇಶ್ ಅವರ ಮದುವೆ ಬೆಳಗ್ಗೆ ಹಿಂದೂ ಶೈಲಿಯಲ್ಲಿ ನಡೆದಿದ್ದು, ಸಂಜೆ ಕ್ರಿಶ್ಚಿಯನ್ ಶೈಲಿಯಲ್ಲಿ ನಡೆಯಲಿದೆ.
ಕೆಲ ಸಿನಿಮಾ ಸೆಲೆಬ್ರಿಟಿಗಳೂ ಸಹ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಕೀರ್ತಿ ಸುರೇಶ್ ಅವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.