ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣ, 3 ರಾಶಿಗಳ ಜನರ ಜೀವನಲ್ಲಿ ಹಣದ ಹೊಳೆಯೇ ಹರಿಯಲಿದೆ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮಹಾರಾಜ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ (Spiritual News In Kannada). ಇದರಿಂದ ಅಲ್ಲಿ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಮೂರು ರಾಶಿಗಳ ಜನರ ಪಾಲಿಗೆ ಸಾಕಷ್ಟು ಸಕಾರಾತ್ಮಕ ಸಾಬೀತಾಗಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಕುಂಭ ರಾಶಿ: ಶನಿ ದೇವ ನಿಮ್ಮ ರಾಶಿಗೆ ಅಧಿಪತಿ ಮತ್ತು ಆತ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸಂಚರಿಸುತ್ತಿರುವುದರಿಂದ, ಕೇಂದ್ರ ತ್ರಿಕೋನ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ಅಪಾರ ಹೆಚ್ಚಳವನ್ನು ನೀವು ಕಾಣಬಹುದು. ಇದಲ್ಲದೆ ಇತರರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ನೀವು ಯಶಸನ್ನು ಪಡೆಯುವಿರಿ. ಬೌದ್ಧಿಕ ಮಟ್ಟದಲ್ಲಿ ಸುಧಾರಣೆಯಾಗಲಿದೆ. ಕೌಟುಂಬಿಕ ದೃಷ್ಟಿಯಿಂದ ಈ ಸಮಯ ತುಂಬಾ ಅತ್ಯುತ್ತಮವಾಗಿರಲಿದೆ. ಈ ಯೋಗದ ದೃಷ್ಟಿ ನಿಮ್ಮ ಜಾತಕದ ದಾಂಪತ್ಯ ಭಾವದಲ್ಲಿ ನೆರವೇರುತಿದೆ. ಹೀಗಾಗಿ ವಿವಾಹಿತರ ಜೀವನ ಈ ಅವಧಿಯಲ್ಲಿ ಸಾಕಷ್ಟು ಖುಷಿಯಿಂದ ಕೂಡಿರಲಿದೆ. ಇನ್ನೊಂದೆಡೆ ಪಾಟ್ನರ್ಶಿಪ್ ವ್ಯವಹಾರದಲ್ಲಿ ಲಾಭ ನಿಮ್ಮದಾಗಲಿದೆ.
ವೃಷಭ ರಾಶಿ: ಕೆಂದ್ರ ತ್ರಿಕೋನ ರಾಜಯೋಗ ನಿಮ್ಮ ಜಾತಕದ ದೃಷ್ಟಿಯಿಂದ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಶನಿ ಮಹಾರಾಜ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸುವಿರಿ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಶುಭ ಅವಕಾಶಗಳನ್ನು ತರಲಿದೆ. ಅವರಿಗೆ ಪದೋನ್ನತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ಸಮಯ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಹೊಸ ಕೆಲಸ ಆರಂಭಿಸಲು ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ, ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ.
ಸಿಂಹ ರಾಶಿ: ಕೇಂದ್ರ ತ್ರಿಕೋನ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಶನಿ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರದರ್ಶನ ಉತ್ತಮವಾಗಿರಲಿದೆ. ಇದರಿಂದ ಮೇಲಾಧಿಕಾರಿಗಳ ಪ್ರಶಂಸೆಗೆ ನೀವು ಪಾತ್ರರಾಗುವಿರಿ. ಪಾಟ್ನರ್ಶಿಪ್ ವ್ಯವಹಾರ ಆರಂಭಿಸಲು ಇದು ಸಕಾಲ. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಶನಿ ದೇವ ನಿಮ್ಮ ಜಾತಕದ ಪಂಚಮ ಹಾಗೂ ಷಷ್ಟಮ ಭಾವಗಳಿಗೆ ಅಧಿಪತಿ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಸಾಕಷ್ಟು ಯಶಸ್ಸು ಸಿಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)