ಯೂಟ್ಯೂಬರ್ ಆಗಿದ್ದ ಈ ಸುಂದರಿ ಇದೀಗ ಕ್ರೇಜಿ ಹೀರೋಯಿನ್..! ಈಕೆ ಸೌಂದರ್ಯವೇ ಒಂದು ಅದ್ಬುತ..
ನಟನೆಯ ಆಸಕ್ತಿಯಿಂದ ಮಾಡೆಲಿಂಗ್‌ನತ್ತ ಹೆಜ್ಜೆ ಹಾಕಿದ ಈ ನಟಿ, ಒಂದೆಡೆ ಮಾಡೆಲಿಂಗ್ ಮಾಡುತ್ತಲೇ ಇನ್ನೊಂದೆಡೆ ಯೂಟ್ಯೂಬ್ ನಲ್ಲಿ ತನ್ನದೇ ಆದ ಚಾನೆಲ್ ಆರಂಭಿಸಿ, ಯೂಟ್ಯೂಬರ್ ಆಗಿ ಪಯಣ ಶುರು ಮಾಡಿದರು. ನಂತರ ಟಾಲಿವುಡ್ ಹೀರೋಯಿನ್ ಆಗಿ ಬದಲಾದರು.. ಈಕೆಯ ಹೆಸರು.. ಕೇತಿಕಾ ಶರ್ಮಾ
ಈ ಸುಂದರಿಯ ಮೊದಲ ಚಿತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿಲ್ಲ. ಆದರೂ, ಸಾಲು ಸಾಲು ಆಫರ್‌ಗಳು ಬಂದವು. ಯಂಗ್ ಹೀರೋಗಳ ಜೊತೆ ನಟಿಸಿ ಈ ಸುಂದರಿಯ ಸೌಂದರ್ಯ ಗಮನಸೆಳೆಯಿತು.
ಸಧ್ಯ ಕೇತಿಕಾ ಅವರ ಬಾಲ್ಯದ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಈ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಕೇತಿಕಾ.. ಮಾಡೆಲ್-ಕಮ್-ನಟಿಯಾಗಿ ತನಗಾಗಿ ಇಮೇಜ್ ಅನ್ನು ರಚಿಸುವ ಮೊದಲು, ಅವರು ಯೂಟ್ಯೂಬರ್ ಆಗಿ ಗುರುತಿಸಿಕೊಂಡರು.
ಜನಪ್ರಿಯ ಡೈಲಾಗ್‌ಗಳು ಮತ್ತು ಹಾಡುಗಳ ರೀಮಿಕ್ಸ್ ವೀಡಿಯೊಗಳೊಂದಿಗೆ ಬಹಳ ಪ್ರಸಿದ್ಧರಾದರು. 2021 ರಲ್ಲಿ ಅನಿಲ್ ಪಾದೂರಿ ನಿರ್ದೇಶನದ ರೊಮ್ಯಾಂಟಿಕ್ ಚಲನಚಿತ್ರದೊಂದಿಗೆ ತೆಲುಗು ತೆರೆಗೆ ಪಾದಾರ್ಪಣೆ ಮಾಡಿದರು.
ತೆಲುಗಿನಲ್ಲಿ ಲಕ್ಷ, ರಂಗ ರಂಗ ವೈಭವ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಸುಪ್ರೀಂ ಹೀರೋ ಸಾಯಿಧರಮ್ ತೇಜ್ ಅಭಿನಯದ ಬ್ರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಧ್ಯ ಕೇತಿಕಾ ತನ್ನ Instagram ಖಾತೆಯಲ್ಲಿ ಹಂಚಿಕೊಂಡ ಇತ್ತೀಚಿನ ಫೋಟೋಗಳು ನೆಟ್ಟಿಗರನ್ನು ಆಕರ್ಷಸುತ್ತಿವೆ..