ಗೋವಾದ ಬೀದಿಗಳಲ್ಲಿ ಸೌಂದರ್ಯದ ಅಲೆ ಎಬ್ಬಿಸಿದ ಕೇತಿಕಾ..! ಫೋಟೋ ವೈರಲ್

Fri, 10 May 2024-4:20 pm,

ಗ್ಲಾಮರ್ ಗೊಂಬೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಕೇತಿಕಾ ಶರ್ಮಾಗೆ ಅದೇನಾಯ್ತೋ ಗೊತ್ತಿಲ್ಲ ಸಾಲು ಸಾಲು ಸೋಲುಗಳು ಎದುರಾಗುತ್ತಿವೆ.   

ಸದ್ಯ ತೆಲುಗಿನಲ್ಲಿಯೂ ಸಹ ಕೇತಿಕಾಗೆ ಅವಕಾಶಗಳಿಲ್ಲ ಒದಗಿಬರುತ್ತಿಲ್ಲ. ಆದರೂ ಈಕೆಯ ಕ್ರೇಜ್‌ ಕೊಂಚವೂ ಕಡಿಮೆಯಾಗಿಲ್ಲ.  

ಕೇತಿಕಾಗೆ ಸಧ್ಯ ಒಳ್ಳೆಯ ಆಫರ್‌ ಬೇಕಿದ್ದು, ಒಂದೇ ಒಂದು ಸಿನಿಮಾ ಹಿಟ್‌ ಆದರೆ, ಕಮ್‌ ಬ್ಯಾಕ್‌ ಮಾಡ್ತಾರೆ ಅಂತಾರೆ ಅವರ ಅಭಿಮಾನಿಗಳು.  

2021ರಲ್ಲಿ ರೊಮ್ಯಾಂಟಿಕ್ ಸಿನಿಮಾದ ಮೂಲಕ ಟಾಲಿವುಡ್‌ಗೆ ಕೇತಿಕಾ ಎಂಟ್ರಿಕೊಟ್ಟರು. 2022 ರಲ್ಲಿ, ರಂಗ ರಂಗ ವೈಭವಂಗ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಿದರು.   

ಇತ್ತೀಚಿಗೆ ಬಿಡುಗಡೆಯಾದ ಪವನ್ ಕಲ್ಯಾಣ್ ಅವರ ಬ್ರೋ ಚಿತ್ರದಲ್ಲಿ ನಟಿಸಿದ್ದರು, ಈ ಸಿನಿಮಾ ಸಹ ಸುಂದರಿಗೆ ಅಷ್ಟೊಂದು ಕ್ರೇಜ್‌ ನೀಡಲಿಲ್ಲ.  

ಸಧ್ಯ ಗೋವಾದಲ್ಲಿರುವ ಸುಂದರಿ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಸೌಂದರ್ಯ ಹಬ್ಬದಂತಿರುವ ಸುಂದರಿಯ ಸೊಗಸು ಅಭಿಮಾನಿಗಳನ್ನು ಮೂಕರನ್ನಾಗಿಸಿದ್ದು, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

ಕೇತಿಕಾ ಶರ್ಮಾ.. ಪುರಿ ಜಗನ್ನಾಥ್ ಪುತ್ರ ಆಕಾಶ್ ನಟನೆಯ ‘ರೊಮ್ಯಾಂಟಿಕ್’ ಚಿತ್ರದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು.  

ಕೇತಿಕಾ ಶರ್ಮಾ 24 ಡಿಸೆಂಬರ್ 1995 ರಂದು ನವದೆಹಲಿಯಲ್ಲಿ ಜನಿಸಿದರು. ಮಾಡೆಲ್, ಯೂಟ್ಯೂಬರ್, ಸಿಂಗರ್ ಜನಪ್ರಿಯತೆ ಗಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link