KGF: ಒಂದಾನೊಂದು ಕಾಲದಲ್ಲಿ ಮಣ್ಣು ಅಗೆದರೆ ಚಿನ್ನ ಸಿಗ್ತಿತ್ತು, 121 ವರ್ಷಗಳಲ್ಲಿ ದೊರೆತ ಬಂಗಾರವೆಷ್ಟು ಗೊತ್ತಾ?
1. ಚಿನ್ನದ ಗಣಿಯನ್ನು ಆಧಾರವಾಗಿಟ್ಟುಕೊಂಡು ಚಿತ್ರ ಕಥೆ ಹೆಣೆಯಲಾಗಿದೆ - ಕೆಜಿಎಫ್-2 ಅಂದರೆ ಕೋಲಾರ ಗೋಲ್ಡ್ ಫೀಲ್ಡ್ಸ್- ಚಾಪ್ಟರ್ 2 ಬಿಡುಗಡೆಯಾಗಿದೆ. ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರವು ದಕ್ಷಿಣ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಚಿನ್ನದ ಗಣಿ ಆಧಾರಿತವಾಗಿದೆ. ಕೋಲಾರ ಗೋಲ್ಡ್ ಫೀಲ್ಡ್ಸ್ ಸುಮಾರು 3.2 ಕಿಮೀ ಆಳವಿದೆ. ಆದರೆ, 2011ರಲ್ಲಿ ಇದನ್ನು ಸ್ಥಗಿತಗೊಳಿಸಲಾಗಿದೆ.
2. ವಿಶ್ವದ ಖ್ಯಾತ ಚಿನ್ನದ ಗಣಿ - ಕೋಲಾರ ಜಿಲ್ಲೆಯ ರಾಬರ್ಟ್‌ಸನ್‌ಪೇಟೆ ತಾಲೂಕಿನಲ್ಲಿರುವ ಈ ಚಿನ್ನದ ಗಣಿ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಚಿನ್ನದ ಗಣಿಯಾಗಿದೆ. ಜಿಲ್ಲಾ ಕೇಂದ್ರದಿಂದ ಇದು ಸುಮಾರು 30 ಕಿ.ಮೀ. ದೂರದಲ್ಲಿದ್ದು, ಇದನ್ನು 17-18 ನೇ ಶತಮಾನದ ನಡುವೆ ಪ್ರಾರಂಭಿಸಲಾಗಿತ್ತು. ಆ ನಂತರ 121 ವರ್ಷಗಳಲ್ಲಿ ಇಲ್ಲಿಂದ 900 ಟನ್ ಚಿನ್ನವನ್ನು ಹೊರತೆಗೆಯಲಾಗಿದೆ.
3. 1875ರಲ್ಲಿ ಗಣಿಗಾರಿಕೆ ಆರಂಭಗೊಂಡಿತು - ಬ್ರಿಟಿಷ್ ಸೈನಿಕ ಮೈಕೆಲ್ ಫಿಟ್ಜ್‌ಗೆರಾಲ್ಡ್ ಲೆವಲ್ಲಿ 1871 ರಲ್ಲಿ ಭಾರತಕ್ಕೆ ಬಂದಿದ್ದ. ಕೋಲಾರದ ಗಣಿ ಬಗ್ಗೆ ಲೆವೆಲಿಗೆ ಮಾಹಿತಿ ಗೊತ್ತಾದಾಗ ಆತ ಸಾಕಷ್ಟು ಸಂಶೋಧನೆ ನಡೆಸಿದ. ಇದಾದ ನಂತರ 1873ರಲ್ಲಿ ಅಂದಿನ ಮಹಾರಾಜರಿಂದ 20 ವರ್ಷಗಳ ಕಾಲ ಗಣಿಗಾರಿಕೆಗೆ ಪರವಾನಿಗೆಯನ್ನು ಪಡೆದುಕೊಂಡ. 1875 ರಲ್ಲಿ ಮೊದಲ ಬಾರಿಗೆ ಅಲ್ಲಿ ಅಗೆಯುವ ಕಾರ್ಯ ಪ್ರಾರಂಭವಾಯಿತು.
4. ಭಾರತ್ ಗೋಲ್ಡ್ ಮೈನಸ್ ಕೈಸೇರಿದ KGF - ಕೋಲಾರ ಗಣಿಯಿಂದ ಎಷ್ಟು ಚಿನ್ನ ಹೊರ ಬರುತ್ತಿತ್ತು ಎಂದರೆ 1905ರಲ್ಲಿ ಚಿನ್ನದ ಗಣಿಗಾರಿಕೆಯಲ್ಲಿ ಭಾರತ ವಿಶ್ವದಲ್ಲಿಯೇ ಆರನೇ ಸ್ಥಾನಕ್ಕೆ ತಲುಪಿತ್ತು. ಭಾರತ ಸ್ವತಂತ್ರವಾದಾಗ ಕೋಲಾರದ ಗಣಿಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿತು. ಭಾರತ ಸರ್ಕಾರವು ಕೆಜಿಎಫ್ ಅನ್ನು ಭಾರತ್ ಗೋಲ್ಡ್ ಮೈನ್ಸ್‌ಗೆ 1970 ರಲ್ಲಿ ಹಸ್ತಾಂತರಿಸಿತು.
5. ಬ್ರಿಟಿಷರು ಮನೆಗಳನ್ನು ನಿರ್ಮಿಸಿದರು - ಕೋಲಾರದಲ್ಲಿ ಯಾವ ಪರಿ ಚಿನ್ನ ಇತ್ತೆಂದರೆ, ಅಲ್ಲಿನ ನಾಗರಿಕರು ಮಣ್ಣನ್ನು ತೊಳೆದರು ಕೂಡ ಅದರಲ್ಲಿ ಚಿನ್ನದ ಕಣಗಳು ಪತ್ತೆಯಾಗುತ್ತಿದ್ದವು ಎನ್ನಲಾಗುತ್ತದೆ. ಭಾರಿ ಪ್ರಮಾಣದಲ್ಲಿ ಚಿನ್ನ ಪತ್ತೆಯಾಗುತ್ತಿದ್ದ ಕಾರಣ ಈ ಪ್ರದೇಶ ಬ್ರಿಟಿಷರಿಗೆ ತುಂಬಾ ಇಷ್ಟವಾಗಿ ಅವರು ಅಲ್ಲಿ ಮನೆಗಳನ್ನು ನಿರ್ಮಿಸಲು ಆರಂಭಿಸಿದರು ಎನ್ನಲಾಗುತ್ತದೆ.