ಯಶ್-ರಾಧಿಕಾ ಗೋವಾ ಸಿಎಂ ಭೇಟಿ! ರಾಜಕೀಯಕ್ಕೆ ಬರ್ತಾರಾ ರಾಕಿಂಗ್ ಸ್ಟಾರ್?
ದೇಶಾದ್ಯಂತ ಮಾತ್ರವಲ್ಲದೆ ವಿದೇಶದಲ್ಲಿಯೂ ಕೆಜಿಎಫ್ 2 ಭಾರೀ ಸದ್ದು ಮಾಡಿದ ಬೆನ್ನಲ್ಲೇ ನಟ ಯಶ್ ಪಾಲಿಟಿಕ್ಸ್ಗೆ ಎಂಟ್ರಿ ಕೊಡುವ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ್ದಾರೆ.
ಕೆಜಿಎಫ್ 2 ಯಶಸ್ಸಿನ ಬಳಿಕ ಇದೀಗ ಜ್ಯೋತಿಷಿಗಳು ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ.
ಸಮಾಜಮುಖಿ ಕಾರ್ಯಗಳಲ್ಲಿ ಮುಂದಿರುವ ಯಶ್ ದಂಪತಿ ಇತ್ತೀಚೆಗಷ್ಟೇ ಗೋವಾ ಸಿಎಂ ಅವರನ್ನು ಭೇಟಿಯಾಗಿರುವುದು ಅನೇಕ ಚರ್ಚೆಗಳಿಗೆ ನಾಂದಿ ಹಾಡಿದೆ.
ಪತ್ನಿ ಸಮೇತರಾಗಿ ಗೋವಾ ಸಿಎಂ ಪ್ರಮೋದ್ ರಾವತ್ ಅವರನ್ನು ಭೇಟಿಯಾಗಿರುವ ಯಶ್ ನಡೆ ರಾಜಕೀಯಕ್ಕೆ ಧುಮಕುವುದರ ಮುನ್ಸೂಚನೆಯೇ ಎಂಬ ಗಾಸಿಪ್ ಎಲ್ಲೆಡೆ ಹಬ್ಬುತ್ತಿದೆ.