‘ರಾವಣ’ ಪಾತ್ರ ಮಾಡಲು ನಟ ಯಶ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ‘ಆದಿಪುರುಷ್’ ಎಂಬ ಸಿನಿಮಾ ತೆರೆಗೆ ಬಂದಿತ್ತು. ಆದರೆ ಓಂ ರಾವತ್ ಅವರ ಆ ಸಿನಿಮಾ ಬಾಲಿವುಡ್’ನಲ್ಲಿ ಸದ್ದೇ ಮಾಡದೆ ವೈಫಲ್ಯ ಕಂಡಿತ್ತು.
ವರದಿಗಳ ಪ್ರಕಾರ, ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನು ರಾವಣನ ಪಾತ್ರಕ್ಕೆ ಜೀವ ತುಂಬಲಿರುವುದು ಬೇರೆ ಯಾರೂ ಅಲ್ಲ, ಕೆಜಿಎಫ್ ಖ್ಯಾತಿಯ ದಕ್ಷಿಣದ ಸೂಪರ್ ಸ್ಟಾರ್ ನಟ ಯಶ್.
ಅಂದಹಾಗೆ ರಾವಣನ ಪಾತ್ರದಲ್ಲಿ ಅಭಿನಯಿಸಲಿರುವ ನಟ ಯಶ್ ಪಡೆಯುತ್ತಿರುವ ಸಂಭಾವನೆ ಬಗ್ಗೆ ಭಾರೀ ಚರ್ಚೆಗಳು ಕೇಳಿಬರುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಲು ಯಶ್ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
ರಾಮಾಯಣ ಸಿನಿಮಾದ ಮೂಲಕ ಬಾಲಿವುಡ್’ನಲ್ಲಿ ಯಶ್ ಅಧಿಕೃತವಾಗಿ ಹೆಜ್ಜೆಯಿಡಲಿದ್ದಾರೆ. ಈಗಾಗಲೇ ದಕ್ಷಿಣದಲ್ಲಿ ಸೂಪರ್ ಸ್ಟಾರ್ ಆಗಿರುವ ಯಶ್, ಹಿಂದಿ ಸಿನಿರಂಗದಲ್ಲಿ ತಮ್ಮ ಲಕ್ ಟೆಸ್ಟ್ ಮಾಡಲಿದ್ದಾರೆ.
ಇನ್ನು ತಿವಾರಿಯವರ ರಾಮಾಯಣ ಸಿನಿಮಾವು ಮುಂದಿನ ವರ್ಷ ಫೆಬ್ರವರಿಯಲ್ಲಿ ತೆರೆಗೆ ಬರಲಿಗೆ ಎಂದು ಹೇಳಲಾಗುತ್ತಿದೆ.