4 ಕೋಟಿ ಬಂಗಲೆ, ದುಬಾರಿ ಕಾರುಗಳು.. ಕೆಜಿಎಫ್ ಸ್ಟಾರ್ ಯಶ್ ಆಸ್ತಿ ಒಟ್ಟು ಎಷ್ಟು ಕೋಟಿ ಗೊತ್ತಾ?
2000 ರಲ್ಲಿ ಕಿರುತೆರೆ ಕಲಾವಿದರಾಗಿ ತೆರೆಗೆ ಬಂದ ಯಶ್ ನಂತರ ರಾಕಿಂಗ್ ಸ್ಟಾರ್ ಆಗಿ ಬೆಳೆದರು. ಸತತ ಪರಿಶ್ರಮದಿಂದ ಕನ್ನಡ ಚಿತ್ರರಂಗದ ಟಾಪ್ ನಟರ ಪಟ್ಟಿ ಸೇರಿದರು. ನಟನೆ, ಡ್ಯಾನ್ಸ್, ಡೈಲಾಗ್ ಮೂಲಕ ಜನಮನ ಗೆದ್ದಿದ್ದಾರೆ.
ಅಂದು 500 ರೂಪಾಯಿ ಇಂದ ಆರಂಭವಾದ ಯಶ್ ಸಂಭಾವನೆ ಇಂದು ಕೋಟಿ ಕೋಟಿ ರೂಪಾಯಿಗೆ ಬಂದು ನಿಂತಿದೆ. ಇಂದು ಯಶ್ ಆಸ್ತಿ ಮೌಲ್ಯ 500 ಕೋಟಿಗೂ ಹೆಚ್ಚು ಎಂದು ಸ್ಟಾಕ್ ಗೋ ವರದಿಗಳು ಹೇಳುತ್ತವೆ.
ನಟನೆಯ ಹೊರತಾಗಿ, ಯಶ್ ರಿಯಲ್ ಎಸ್ಟೇಟ್ ಮತ್ತು ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ ಹಲವು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ಯಶ್ ಪ್ರತಿ ಜಾಹೀರಾತಿಗೆ 60 ರಿಂದ 80 ಲಕ್ಷ ರೂಪಾಯಿ ಪಡೆಯುತ್ತಾರೆ.
ಇತರ ಹೂಡಿಕೆಗಳಿಂದ ಯಶ್ ಅವರ ವಾರ್ಷಿಕ ಆದಾಯ ಸುಮಾರು 10 ಕೋಟಿಗಳಷ್ಟು ಎಂದು ನಿರೀಕ್ಷಿಸಲಾಗಿದೆ.
ಕಂಪನಿಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಯಶ್ ಬೆಂಗಳೂರಿನಲ್ಲಿ 4 ಕೋಟಿ ಮೌಲ್ಯದ ಡ್ಯೂಪ್ಲೆಕ್ಸ್ ಮನೆ, 6 ಕೋಟಿಗೂ ಹೆಚ್ಚು ಮೌಲ್ಯದ ಭೂಮಿ ಮತ್ತು ಇತರ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ.
ಯಶ್ ಮನೆಯ ಗ್ಯಾರೇಜ್ ನಲ್ಲಿ ದುಬಾರಿ ಬೆಲೆಯ ಕಾರುಗಳಿವೆ. ಕಳೆದ ವರ್ಷ 5 ಕೋಟಿ ಮೌಲ್ಯದ ರೇಂಜ್ ರೋವರ್ ಕಾರನ್ನು ಖರೀದಿಸಿದ್ದರು. ಯಶ್ ಅವರ ಗ್ಯಾರೇಜ್ ನಲ್ಲಿ 85 ಲಕ್ಷ ಮೌಲ್ಯದ Mercedes-Benz DLS 350D ಕೂಡ ಇದೆ.
ಕೆಜಿಎಫ್ ಚಿತ್ರದ ಮೂಲಕ ಯಶ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆದರು. ಇದೀಗ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಯಶ್ ಸಿನಿಮಾದ ಮೇಲೆ ಕಣ್ಣಿಟ್ಟಿದೆ.