Kiara Advani:ಡಾನ್‌ 3 ಚಿತ್ರದಲ್ಲಿ ನಟಿಸುವುದಕ್ಕೆ 50% ಗಿಂತ ಅಧಿಕ ಸಂಭಾವನೆ ಪಡೆಯುತ್ತಿರುವ ನಟಿ!

Tue, 05 Mar 2024-5:32 pm,

ಬಿ-ಟೌನ್‌ ಬೆಡಗಿ ಕಿಯಾರಾ ಅಡ್ವಾನಿ ತಮ್ಮ ಮದುವೆ ಬಳಿಕವೂ ಬಾಲಿವುಡ್‌ ಅಂಗಳದಲ್ಲಿ ಭಾರೀ ಬೇಡಿಕೆಯ ನಟಿ ಆಗಿದ್ದು, ಈಗಲೂ ಸಖತ್‌ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಕಿಯಾರಾ ಅಡ್ವಾನಿ ಕೆಲವು ದಿನಗಳ ಹಿಂದೆಯಷ್ಟೇ ಡಾನ್ 3 ಸಿನಿಮಾ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ನಟಿ  ಚಿತ್ರದಲ್ಲಿ ರಣವೀರ್ ಸಿಂಗ್‌ ಜೊತೆಗೆ ಬಣ್ಣ ಹಚ್ಚುತ್ತಿದ್ದಾರೆ.

ಬಾಲಿವುಡ್‌ ನಟಿ ಕಿಯಾರ ಅಡ್ವಾನಿ ಡಾನ್‌ 3 ಚಿತ್ರದಲ್ಲಿ ನಟಿಸಲು 50%ರಷ್ಟು ಸಂಭಾವನೆ ಹೆಚ್ಚಿಸಿಕೊಂಡಿರುವುದನ್ನು ಕೇಳಿ ಹಿಂದಿ ಚಿತ್ರರಂಗದವರು ದಂಗಾಗಿದ್ದಾರೆ.

ಹಿಂದಿ ಸಿನಿಮಾರಂಗದ ಬೆಡಗಿ ಕಿಯಾರಾ ಅಡ್ವಾನಿ ಡಾನ್‌ 3 ಚಿತ್ರದಲ್ಲಿ ಅಭಿನಯಿಸಲು ಬರೋಬ್ಬರಿ 13 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಕಿಯಾರಾ ಅಡ್ವಾನಿ ಡಾನ್‌ 3 ಸಿನಿಮಾದಲ್ಲಿ ಸಾಹಸ ದೃಶ್ಯಗಳು ಹೆಚ್ಚಾಗಿರಲಿದ್ದು, ಅದಕ್ಕಾಗಿ ಈಕೆ ಭರ್ಜರಿ ತಯಾರಿ ಕೂಡ ನಡೆಸುತ್ತಿರುವ ಕಾರಣ ಈ ಚಿತ್ರಕ್ಕೆ ಅಧಿಕ ಸಂಭಾವನೆಯನ್ನು ಪಡೆಯುತ್ತಿದ್ದಾರೆ

ನಟಿ ಕಿಯಾರಾ ಈ ಹಿಂದೆ ನಟಿಸಿದ ಎಂ.ಎಸ್ ಧೋನಿ, ಶೇರ್ಷಾ, ಕಬೀರ್ ಸಿಂಗ್, ಭೂಲ್ ಭುಲಯ್ಯ 2 ಸಿನಿಮಾಗಳಲ್ಲಿ ನಟಿಸಲು 4ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link