Kiara Advani Wedding: ವಿವಾಹಕ್ಕಾಗಿ ಮನೆಯಿಂದ ಹೊರಟ್ರಾ ಕಿಯಾರಾ ಅಡ್ವಾಣಿ! ದೀಪಿಕಾ ಕೂಡ ಇದೆ ಕೆಲಸ ಮಾಡಿದ್ರು
1. ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕಿಯಾರಾ- ಸಿದ್ಧಾರ್ಥ್ ತಾವು ಪರಸ್ಪರ ಸ್ನೇಹಿತರಿಗಿಂತ ಹೆಚ್ಚು ಎಂದು ಒಪ್ಪಿಕೊಂಡಿರುವ ಸಂಗತಿ ಜಗಜ್ಜಾಹೀರಾಗಿರುವುದು ನಿಮ್ಮೆಲ್ಲರಿಗೂ ತಿಳಿದೇ ಇದೆ ಮತ್ತು ಕೆಲವು ಸಮಯದಿಂದ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳು ಕೂಡ ಕೇಳಿಬರುತ್ತಿವೆ. ಆದರೆ, ಮದುವೆಯ ಆ ಶುಭ ಗಳಿಗೆ ಬಂದಿದೆಯೇ ಎಂದೆನಿಸಲಾರಂಭಿಸಿದೆ.
2. ಇದಕ್ಕೆ ಕಾರಣ ಎಂದರೆ ಕಿಯಾರಾ ಇತ್ತೀಚಿನ ಏರ್‌ಪೋರ್ಟ್ ನಲ್ಲಿ ಕಾಣಿಸಿಕೊಂಡ ಪರಿ ದೀಪಿಕಾ ಅವರ ಏರ್‌ಪೋರ್ಟ್ ಲುಕ್‌ಗಿಂತ ಹೆಚ್ಚು ಭಿನ್ನವಾಗಿಲ್ಲ. ವಾಸ್ತವದಲ್ಲಿ, ಮದುವೆಗೆ ಮೊದಲು, ದೀಪಿಕಾ ವಿಮಾನ ನಿಲ್ದಾಣದಲ್ಲಿ ಇದೇ ಲುಕ್ ನಲ್ಲಿ ಕಾಣಿಸಿಕೊಂಡಿದ್ದಳು ಎಂಬುದು ಇಲ್ಲಿ ಉಲ್ಲೇಖನೀಯ. ನಂತರ ಅವಳು ರಣವೀರ್ ಸಿಂಗ್ ಅವರ ಪತ್ನಿಯಾಗಿ ಮುಂಬೈಗೆ ಮರಳಿದ್ದಳು.
3. ಈ ಇಬ್ಬರು ನಟಿಮಣಿಯರು ಕಾಣಿಸಿಕೊಂಡಿರುವ ಪರಿಯನ್ನೊಮ್ಮೆ ವಿಶ್ಲೇಷಿಸುವುದಾದರೆ, ದೀಪಿಕಾ ಕ್ರೀಮ್ ಸ್ವೆಟರ್ ಮತ್ತು ಪೆನ್ಸಿಲ್ ಸ್ಕರ್ಟ್ ಧರಿಸಿದ್ದರೆ, ಕಿಯಾರಾ ಅದೇ ಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದಾಳೆ. ಇಬ್ಬರ ಏರ್ ಪೋರ್ಟ್ ಲುಕ್ ತುಂಬಾ ಹೋಲುತ್ತಿದ್ದು, ದೀಪಿಕಾ ಅವರಂತೆಯೇ ಕಿಯಾರಾ ಕೂಡ ಮದುವೆಯಾಗಲಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
4. ಈ ಫೋಟೋನಲ್ಲಿ ಕಿಯಾರಾ ಕೂಡ ದೀಪಿಕಾಳಂತೆ ಕೂದಲನ್ನು ಸ್ಟ್ರೈಟ್ ಮಾಡಿಕೊಂಡಿದ್ದಾಳೆ ಮತ್ತು ಆಕೆ ಮದುವೆಗೆ ಹೊರಟಿದ್ದಾಳೆ ಎಂಬುದನ್ನು ಆಕೆಯ ಮುಖದ ಹಾವಭಾವದಿಂದ ನಾವು ಹೇಳಬಹುದು.
5. ಪ್ರಸ್ತುತ, ಅಧಿಕೃತವಾಗಿ ಈ ಊಹಾಪೋಹಗಳಿಗೆ ಯಾವುದೇ ದೃಢೀಕರಣವಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಸಿಡ್ ಮತ್ತು ಕಿಯಾರಾ ಇಬ್ಬರೂ ಮದುವೆಗೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.