Kichcha Sudeep : ರಾಜಕೀಯಕ್ಕೆ ಕಿಚ್ಚ ಸುದೀಪ್ ಎಂಟ್ರಿ? ಕಾಂಗ್ರೆಸ್‌ನಿಂದ ಬಂತಾ ಆಹ್ವಾನ!
ಕನ್ನಡ ಮಾತ್ರವಲ್ಲ ಭಾರತಾದ್ಯತ ಖ್ಯಾತಿ ಪಡೆದಿರುವ ನಟ ಕಿಚ್ಚ ಸುದೀಪ್ ವಿಚಾರದಲ್ಲಿ ವದಂತಿಯೊಂದು ಶುರುವಾಗಿದೆ.
ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುದೀಪ್ ಈಗ ರಾಜಕೀಯ ಎಂಟ್ರಿ ಕೊಡಲಿದ್ದಾರಂತೆ.
ಅಲ್ಲದೇ ಕಾಂಗ್ರೆಸ್ ಪಕ್ಷ ಸದೀಪ್ ಅವರಿಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮೂಲಕ ಬಲೆ ಬೀಸಿದೆಯಂತೆ. ಇಂತಹದ್ದೊಂದು ಗಾಳಿ ಸುದ್ದಿ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.
ಕಾಂಗ್ರೆಸ್ ಮಾಜಿ ಸಂಸದೆ, ನಟಿ ರಮ್ಯಾ ಕಿಚ್ಚ ಸುದೀಪ್ ಅವರಿಗೆ ಬಹಿರಂಗವಾಗಿ ಆಹ್ವಾನ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ಸುದೀಪ್ ಅವರಿಗೆ ಈ ಭರ್ಜರಿ ಆಫರ್ ನೀಡಲಾಗಿದೆಯಂತೆ. ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಕಾಂಗ್ರೆಸ್‌ನಲ್ಲಿ ಶುರುವಾಗಿದೆಯಂತೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆಗಳು ಮಾತ್ರ ದೊರೆತಿಲ್ಲ.