ನಟ ಕಿಚ್ಚ ಸುದೀಪ್ ತಂದೆ-ತಾಯಿ ಯಾರು ಗೊತ್ತಾ? ಕರುನಾಡ ಮಾಣಿಕ್ಯನ ಅಪ್ಪ ಸ್ಯಾಂಡಲ್ವುಡ್’ನಲ್ಲಿ ಸಖತ್ ಫೇಮಸ್
ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಇವರು ಒಂದಲ್ಲ ಎರಡಲ್ಲ, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸ್ಪರ್ಷ (2000), ಹುಚ್ಚ (2001), ನಂದಿ (2002), ಕಿಚ್ಚ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73, ಶಾಂತಿ ನಿವಾಸ (2000) ಹೀಗೆ ಹಲವಾರು ಅದ್ಭುತ ಸಿನಿಮಾಗಳಲ್ಲಿ ಅಭಿನಯಿಸಿ ಕರುನಾಡ ಅಭಿನಯ ಚಕ್ರವರ್ತಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.
ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ಬಾರಿ ಕನ್ನಡದ ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡವನ್ನು 2013 ರಿಂದ ಹೋಸ್ಟ್ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಯ ಪುತ್ರನಾಗಿ 2 ಸೆಪ್ಟೆಂಬರ್ 1971 ರಂದು ಸುದೀಪ್ ಜನಿಸಿದರು. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್’ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಎಂಜಿನಿಯರಿಂಗ್’ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಕಿಚ್ಚ. ಇನ್ನು ಕಿಚ್ಚನಿಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ.
ಸುದೀಪ್ ಅವರು ಪ್ರಿಯಾ ಅವರನ್ನು ಪ್ರೀತಿಸಿ 2001ರಲ್ಲಿ ವಿವಾಹವಾದರು. ಪ್ರಿಯಾ ತಮ್ಮ ಮದುವೆಗೆ ಮೊದಲು ಏರ್‌ಲೈನ್ ಕಂಪನಿಯಲ್ಲಿ ಮತ್ತು ಬ್ಯಾಂಕ್’ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಸಾನ್ವಿ ಎಂಬ ಮಗಳಿದ್ದಾರೆ.
ಅಂದಹಾಗೆ ಸುದೀಪ್ ಅವರ ತಂದೆ ಸಂಜೀವ್ ಮಂಜಪ್ಪ ಹೋಟೆಲ್ ಉದ್ಯಮದ ಜೊತೆ ಸಿನಿಮಾ ನಿರ್ಮಾಪಕರಾಗಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್ ಅವರ ಮೊದಲ ಸಿನಿಮಾ ತಾಯವ್ವದಲ್ಲಿ ಪೋಷಕ ನಟನಾಗಿ ಸಂಜೀವ್ ಅವರು ಅಭಿನಯಿಸಿದ್ದರು.