ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಬಗ್ಗೆ ಮೊದಲ ಬಾರಿಗೆ ಕಿಚ್ಚ ಸುದೀಪ್ ರಿಯಾಕ್ಷನ್
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ ಸುಮಾರು 17 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, “ನಾನು ಅವರ ಪರ, ಇವರ ಪರ ಎಂದು ಮಾತಾಡಲ್ಲ. ರೇಣುಕಾಸ್ವಾಮಿ ಪತ್ನಿ ಸಹನಾಗೆ ನ್ಯಾಯ ಸಿಗಬೇಕು. ಎಲ್ಲಾ ವಿಚಾರ ಗೊತ್ತಿಲ್ಲ. ಆದರೆ ಎಲ್ಲರ ಹೃದಯ ನೊಂದಿದೆ. ನನಗೆ ಸೇರಿದಂತೆ ಚಿತ್ರರಂಗಕ್ಕೂ ಏನು ಸರಿಯಾಗಿ ಕಾಣುತ್ತಿಲ್ಲ” ಎಂದು ಹೇಳಿದ್ದಾರೆ.
“ಈ ಕೇಸ್’ನಿಂದ ದರ್ಶನ್ ಆಚೆ ಬಂದ್ರೆ ಏನು ಇರಲ್ಲ. ಬ್ಯಾನ್ ಅನ್ನೋದಕ್ಕಿಂತ ನ್ಯಾಯ ಅನ್ನೋ ಪದ ದೊಡ್ಡದು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕು. ಯಾವತ್ತು ಈ ತರ ಆಗಬಾರದು” ಎಂದಿದ್ದಾರೆ.
“ಬ್ಯಾನ್ ವಿಚಾರ ನಾವು ನಿರ್ಧಾರ ಮಾಡೋದಲ್ಲ. ಹೊರಬಂದ್ರೆ ಸಿನಿಮಾ ಮಾಡ್ತಾರೆ. ನಾವು ಮಾತಾಡಿದ್ರೆ ಕೊನೆಗೆ ಜೋಕ್ ಮಾಡ್ತಾರೆ. ಅಂದು ದರ್ಶನ್ ಕುಟುಂಬದ ಕಲಹಗಳಲ್ಲಿ ಮಧ್ಯಸ್ಥಿಕೆ ವಹಿಸಿದವರೇ ಕೆಟ್ಟವರಾದರು. ಕೊನೆಗೆ ಅವರೇ ಒಂದಾದ್ರು” ಎಂದು 2011ರ ದರ್ಶನ್ ಕೌಟುಂಬಿಕ ಕಲಹದ ಘಟನೆಯನ್ನು ಸುದೀಪ್ ಪರೋಕ್ಷವಾಗಿ ನೆನೆದರು.
“ದರ್ಶನ್ ರಿಲೇಷನ್ಶಿಪ್ ಮುಖ್ಯ ಅಲ್ಲ. ಕಣ್ಮುಂದೆ ಸಹನಾ ಕುಟುಂಬ ಮಾತ್ರ ಕಾಣ್ತಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಇದು ನನಗೂ ಸರಿಯಾಗಿ ಕಾಣಿಸ್ತಿಲ್ಲ. ಚಿತ್ರರಂಗಕ್ಕೆ ಸರಿ ಅನಿಸುತ್ತಿಲ್ಲ” ಎಂದು ನುಡಿದರು.