BBK Winner: ಸಂಗೀತಾನೂ ಅಲ್ಲ, ವಿನಯ್ ಕೂಡ ಅಲ್ಲ… ಈ ಸ್ಪರ್ಧಿಯೇ ‘ಬಿಗ್ ಬಾಸ್’ ವಿಜೇತ ಅಂತ ಸುಳಿವು ಕೊಟ್ಟ ಕಿಚ್ಚ ಸುದೀಪ್!
ಬಿಗ್ ಬಾಸ್ ಕನ್ನಡ ಸೀಸನ್ 10, ಇದುವರೆಗಿನ ಎಲ್ಲಾ ಸೀಸನ್’ಗಳಿಗಿಂತ ವಿಭಿನ್ನವಾಗಿತ್ತು ಎಂದು ಕಿಚ್ಚ ಸುದೀಪ್ ಅವರೇ ಕಳೆದ ದಿನ ಹೇಳಿಕೆ ನೀಡಿದ್ದರು.
ಇದೀಗ ಟಾಪ್ 5ರಲ್ಲಿ ವರ್ತೂರ್ ಸಂತೋಷ್, ವಿನಯ್ ಗೌಡ, ಪ್ರತಾಪ್, ಸಂಗೀತಾ ಮತ್ತು ಕಾರ್ತಿಕ್ ಇದ್ದಾರೆ. ಕಳೆದ ದಿನ ತುಕಾಲಿ ಸಂತೋಷ್ ಅವರು ಮನೆಯಿಂದ ಹೊರಬಂದಿದ್ದರು.
ಈ ಬೆನ್ನಲ್ಲೇ ಕಿಚ್ಚ ಸುದೀಪ್ ನೀಡಿರುವ ಒಂದು ಹೇಳಿಕೆ ಬಿಗ್ ಬಾಸ್ ವಿನ್ನರ್ ಯಾರೆಂಬುದನ್ನು ಸೂಚಿಸಿದಂತಿದೆ. ಪ್ರತಿಯೊಬ್ಬ ಸ್ಪರ್ಧಿಗಳ ಜೊತೆ ಮಾತನಾಡಿದ ಕಿಚ್ಚ, ಕಾರ್ತಿಕ್ ಬಳಿಯೂ ಕೂಡ ತಮಗೆ ಮನೆ ಹೊರಗಡೆ ಇರುವ ಫ್ಯಾನ್ ಫಾಲೋವರ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿದ ಕಾರ್ತಿಕ್ ಕಣ್ಣೀರು ಹಾಕುತ್ತಾ ಇಡೀ ಅಭಿಮಾನಿ ಬಳಗಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸುದೀಪ್, “ಕಾರ್ತಿಕ್ ಅವರೇ ಅಳಬೇಡಿ… ಇಷ್ಟೊಂದು ಜನ ತೋರಿದ ಪ್ರೀತಿಯನ್ನು ಹೊರಗಡೆ ಬಂದ ಮೇಲೆ ಎಂಜಾಯ್ ಮಾಡಿ, ಪಾರ್ಟಿ ಮಾಡಿ.. ಕೂಲ್ ಆಗಿ ಇದ್ದು ಬಿಡಿ” ಎಂದು ಹೇಳಿದ್ದಾರೆ.
ಈ ಮಾತುಗಳನ್ನು ಕೇಳಿಸಿಕೊಂಡ ಫ್ಯಾನ್ಸ್ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಎಂದೇ ಹೇಳುತ್ತಿದ್ದಾರೆ, ಅಷ್ಟೇ ಅಲ್ಲದೆ, ಬಲ್ಲ ಮೂಲಗಳ ಮಾಹಿತಿ ಪ್ರಕಾರ ಕಾರ್ತಿಕ್ ಅವರೇ ಈ ಬಾರಿಯ ವಿಜೇತ ಎಂದು ಹೇಳಲಾಗುತ್ತಿದೆ.