Bigg Boss Kannada: `ನೀವು ಈ ಆಟಕ್ಕೆ ಫಿಟ್ ಅಲ್ಲ...` ವೇದಿಕೆ ಮೇಲೆಯೇ ಗರಂ ಆದ ಕಿಚ್ಚ ಸುದೀಪ್! ಎಲಿಮಿನೇಷನ್ ಇಲ್ದೆ ಇದ್ರೂ ಹೊರಹೋಗ್ತಾರ ಈ ಸ್ಟ್ರಾಂಗ್ ಕಂಟೆಸ್ಟೆಂಟ್?
ಶನಿವಾರ ಬಂತೆಂದರೆ ಸಾಕು ಕನ್ನಡ ಬಿಗ್ ಬಾಸ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗೋದು ಗ್ಯಾರಂಟಿ. ಕಿಚ್ಚ ಸುದೀಪ್ ಪಂಚಾಯ್ತಿ ನೋಡಲು ತುದಿಕಾಲಲ್ಲಿ ಕಾಯುವ ಜನರಿಗೆ ಈ ವಾರಾಂತ್ಯ ಬಂದರೆ ಖುಷಿಯೋ ಖುಷಿ.
ಈ ವಾರ ಕಿಚ್ಚ ಸುದೀಪ್ ಅವರು ಚೈತ್ರಾಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದು ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊರಬಿದ್ದಿದೆ.
ಹೊಸ ಪ್ರೋಮೋ ಔಟ್ ಆಗಿದ್ದು, ಕಿಚ್ಚ ಚೈತ್ರಾಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರ ಚೈತ್ರಾ ಅವರು, ಉಸ್ತುವಾರಿ ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ವಾರ ಉಸ್ತುವಾರಿಯಲ್ಲಿ ಚೈತ್ರಾ ಪಕ್ಷಪಾತ ಮಾಡಿರುವುದು ಅನೇಕ ಸಂದರ್ಭಗಳಲ್ಲಿ ಕಾಣಿಸಿತ್ತು. ಈ ವಿಚಾರಕ್ಕೆ ಹಲವರು ಕಳಪೆಯನ್ನು ಕೊಟ್ಟಿದ್ದರು. ಸತತವಾಗಿ ಚೈತ್ರಾ ಕಳಪೆ ಪಟ್ಟ ಪಡೆದಿದ್ದರು. ಈ ವಿಚಾರವಾಗೇ ಕಿಚ್ಚನ ಮುಂದೆ ಕಂಪ್ಲೇಟ್ ಮಾಡಿದ್ದ ಚೈತ್ರಾ, "ಕೆಲವರು ಗುಂಪು ಕಟ್ಟಿಕೊಂಡು ಕಳಪೆ ನೀಡುತ್ತೀದ್ದಾರೆ. ಇದರಿಂದ ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ" ಎಂದಿದ್ದಾರೆ.
ಇದಕ್ಕೆ ಸಿಟ್ಟಾದ ಕಿಚ್ಚ, "ಯಾರು ನಿಮ್ಮನ್ನು ಈ ವಾರ ಮಾನಸಿಕವಾಗಿ ಕುಗ್ಗಿಸಿದ್ರು?" ಎಂದು ಪ್ರಶ್ನಿಸಿದ್ದಾರೆ. ಮತ್ತೆ ಮಾತು ಮುಂದುವರೆಸಿರುವ ಕಿಚ್ಚ, "ನೀವು ಹೇಳ್ತಿದ್ದೀರ ಅಲ್ವಾ ನಿಮ್ಮನ್ನ ಕುಗ್ಗಿಸಿದ್ರು ಅಂತಾ... ಹಾಗಾದ್ರೆ ನೀವು ತಗೊಳ್ಳೋ ಹೆಸರು ಕೂಡ ಅವರನ್ನ ಕುಗ್ಗಿಸಲ್ವಾ? ಬಾಣ ಕೊಡೋಕೆ ರೆಡಿಯಿದ್ದು, ತಗೋಳೋಕೆ ರೆಡಿಯಿಲ್ಲ ಅಂದ್ರೆ ನೀವು ಈ ಆಟಕ್ಕೆ ಫಿಟ್ ಇಲ್ಲ ಅಂತ ಅರ್ಥ" ಎಂದು ಗರಂ ಆಗಿದ್ದಾರೆ.
ಇನ್ನು ಈ ವಾರ ವೋಟಿಂಗ್ ಲೈನ್ ತೆರೆದಿಲ್ಲ. ಈ ಹಿನ್ನೆಲೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಇಲ್ಲ ಎಂದು ಹೇಳಲಾಗುತ್ತಿದೆ. ಆದ್ರೆ ಚೈತ್ರಾ ಈ ಆಟಕ್ಕೆ ಫಿಟ್ ಇಲ್ಲ ಎಂದು ಕಿಚ್ಚ ಹೇಳಿದ್ದು, ಹೊರಹೋಗ್ತಾರ? ಅಥವಾ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುತ್ತಾರಾ? ಎಂದು ಕಾದುನೋಡಬೇಕಿದೆ