ಕಿಚ್ಚನ ಲವ್ ಸ್ಟೋರಿ.. ಇಲ್ಲಿದೆ ಸುದೀಪ್ ಅವರ ಇಂಟರೆಸ್ಟಿಂಗ್ ಪ್ರೇಮ ಕಹಾನಿ
ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಸೌತ್ ಸ್ಟಾರ್ ಸುದೀಪ್ ಅವರ ಲವ್ ಲೈಫ್ ಬಗ್ಗೆ ಇಲ್ಲಿ ಕೆಲವು ಇಂಟರೆಸ್ಟಿಂಗ್ ಸಂಗತಿಗಳಿವೆ.
ಕಿಚ್ಚ ಸುದೀಪ್ 2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಪ್ರಿಯಾ ರಾಧಾಕೃಷ್ಣ ಅವರನ್ನು ಭೇಟಿಯಾಗಿದ್ದರು. 1 ವರ್ಷದ ನಂತರ ದಂಪತಿಗಳು 2001 ರಲ್ಲಿ ವಿವಾಹವಾದರು. ಮದುವೆಗೂ ಮುನ್ನ ಪ್ರಿಯಾ ವಿಮಾನಯಾನ ಸಂಸ್ಥೆ ಮತ್ತು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸುದೀಪ್-ಪ್ರಿಯಾ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ.
ಕಿಚ್ಚ ಸುದೀಪ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ ಪರಿಣಾಮ, 2015 ರಲ್ಲಿ ದಂಪತಿಗಳು ಬೇರ್ಪಟ್ಟರು. ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ವರದಿಗಳ ಪ್ರಕಾರ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವರು 4 ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ, ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾಗಲೂ ಅವರು ತಮ್ಮ ಮಗಳಿಗಾಗಿ ಒಟ್ಟಿಗೆ ಸೇರುತ್ತಿದ್ದರು.
ತನ್ನ ವೈವಾಹಿಕ ಜೀವನದ ಸಮಸ್ಯೆಗಳನ್ನು ಸುದೀಪ್ ಯಾರಿಗೂ ತಿಳಿಸುತ್ತಿರಲಿಲ್ಲ. ಸುದೀಪ್ ಪತ್ನಿಯಿಂದ ಮಗಳ ಕಸ್ಟಡಿ ಪಡೆಯದಿರಲು ನಿರ್ಧರಿಸಿದ್ದರು. ನಟ ವಿಚ್ಛೇದನ ಪಡೆದರೆ 19 ಕೋಟಿ ಕೊಡಬೇಕಾಗುತ್ತಿತ್ತು ಎಂಬ ಚರ್ಚೆ ನಡೆದಿತ್ತು.
ಅದೃಷ್ಟವಶಾತ್ ಇಬ್ಬರೂ ಬೇರ್ಪಡಲಿಲ್ಲ. ಕಿಚ್ಚ ಮತ್ತು ಪ್ರಿಯಾ ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡಿದರು. ಒಂದು ವರ್ಷದ ನಂತರ, ಇಬ್ಬರೂ ತಮ್ಮ ಮಗಳ ಸಲುವಾಗಿ ವಿಚ್ಛೇದನ ಪಡೆಯದಿರಲು ನಿರ್ಧರಿಸಿದರು.
ಮತ್ತೆ ಒಂದಾದ ನಂತರ ಅವರ ಬಾಂಧವ್ಯ ಮೊದಲಿಗಿಂತ ಗಟ್ಟಿಯಾಗಿದೆ. ಅವರು ಈಗ ಒಟ್ಟಿಗೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಕಿಚ್ಚ ಮತ್ತು ಪ್ರಿಯಾ ಸದಾ ಜೊತೆಯಲ್ಲಿರಲಿ ಎಂಬುದು ನಮ್ಮ ಪ್ರಾರ್ಥನೆ. ಅವರ ಈ ಬಾಂಧವ್ಯ ಎಂದಿಗೂ ದುರ್ಬಲವಾಗದಿರಲಿ ಎಂಬುದೇ ಎಲ್ಲರ ಆಶಯ.