ಚಿಕಿತ್ಸೆಗೆಂದು ವಿದೇಶಕ್ಕೆ ಶಿವಣ್ಣನ ಪಯಣ..! ಭೇಟಿ ಮಾಡಿ ಧೈರ್ಯ ತುಂಬಿದ ಸ್ಯಾಂಡಲ್‌ವುಡ್ ದಿಗ್ಗಜರು..
Dr Shivrajkumar: ಇತ್ತೀಚೆಗೆ ಶಿವಣ್ಣನಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಿರುವ ವಿಚಾರ. ಶಿವಣ್ಣ ಅವರು ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ವಿದೇಶಕ್ಕೆ ಹಾರಲಿದ್ದಾರೆ. ಇದರ ಬೆನ್ನಲ್ಲೆ ಶಿವಣ್ಣ ಅವರು ಮನೆಯಲ್ಲಿ ಪೂಜೆ ಮುಗಿಸಿ ವಿದೇಶಕ್ಕೆ ಹಾರಲು ಸಿದ್ದರಾಗಿದ್ದಾರೆ.
ಇಂದು ಶಿವರಾಜ್‌ಕುಮಾರ್ ಅವರು ಚಿಕಿತ್ಸೆಗಾಗಿ ಅಮೇರಿಕಾಗೆ ಶಿವಣ್ಣ ಅವರು ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣ ಮಾಡುತ್ತಿರುವ ಬೆನ್ನಲ್ಲೆ ಶೀವಣ್ಣ ಅವರು ಮನೆಯಲ್ಲಿ ಪೂಜೆ ಮುಗಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಗೆ ಇದೇ ತಿಂಗಳ 24ರಂದು ಸರ್ಜರಿ ನಡೆಯಲಿದ್ದು, ಇಂದು ಶಿವಣ್ಣ ಅಮೇರಿಕಾಕ್ಕೆ ಹಾರಲಿದ್ದಾರೆ.
ಇನ್ನೂ, ಅವರು ವಿದೇಶಕ್ಕೆ ಹಾರುವ ಮುನ್ನ ಕಿಚ್ಚ ಸುದೀಪ್ ಅವರು ಶಿವಣ್ಣನವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಕಿಚ್ಚ ಸುದೀಪ್ ಅಷ್ಟೆ ಅಲ್ಲದೆ ಬಿ ಸಿ ಪಾಟೀಲ್, ವಿನೋದ್ ರಾಜ್, ಸೂರಪ್ಪ ಬಾಬು ಮುಂತಾದವರು ಶಿವಣ್ಣನವರನ್ನು ಭೇಟಿ ಮಾಡಿದ್ದಾರೆ.