ಸ್ವರ್ಗಕ್ಕೂ-ನರಕಕ್ಕೂ ಒಂದೆ ನಂಟು..ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳ ಹಣೆಬರಹ ಬರೆಯಲಿರುವುದು ಪ್ರೇಕ್ಷಕರ ವೋಟು! ಇವರೇ ದೊಡ್ಮನೆಯ ಫೈನಲ್‌ ಪ್ಲೇಯರ್ಸ್‌

Sat, 28 Sep 2024-11:12 am,

BIGG BOSS 11: ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಕ್ಷಣಗಣನೆ ಶುರುವಾಗಿದೆ. ಅನೌನ್ಸ್‌ ಆದಾಗಿನಿಂದಲೂ ಪ್ರೇಕ್ಷಕರಲ್ಲಿ ಇರುವ ಪ್ರಶ್ನೆ, ಈ ಭಾರಿ ಮನೆ ಸೇರಲಿರುವ ಆ ಸ್ಪರ್ದೀಗಳು ಯಾರು ಎಂಬುದು. ಆದರೆ ಇದೀಗ ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಅವರು ಮನೆಗೆ ಯಾವ ಯಾವ ಸ್ಪರ್ಧಿಗಳು ಹೋಗಲಿದ್ದಾರೆ ಎಂಬುದನ್ನು ನೀವೇ ಡಿಸೈಡ್‌ ಮಾಡಬಹುದು ಎಂದಿದ್ದಾರೆ.   

ಇತ್ತೀಚೆಗೆ ರಿಲೀಸ್‌ ಆಗಿರುವ ಬಿಗ್‌ಬಾಸ್‌ ಪ್ರೋಮೋದಲ್ಲಿ ಕಿಚ್ಚಾ ಸುದೀಪ್‌ ಎಂದಿನಂತೆ ಖಡಕ್‌ ಆಗಿ ಕಾಣಿಸಿಕೊಂಡಿದ್ದಾರೆ, ಅಷ್ಟೆ ಅಲ್ಲದೆ ಈ ಪ್ರೋಮೋದಲ್ಲಿ ಹಲವಾರು ಜನರಿರುವ ದೃಶ್ಯ ಕಾಣಿಸಿಕೊಂಡಿದೆ, ಇದೆ ಪ್ರಕಾರ ಈ ವಿಡಿಯೋದಲ್ಲಿ ಹಲವಾರು ಹೊಸ ಮುಖಗಳು ಕಾಣಿಸಿಕೊಂಡಿದ್ದಾರೆ, ಪ್ರೇಕ್ಷಕರೆಲ್ಲಾ ಇವರೇ ಸ್ಪರ್ಧಿಗಳು ಎಂದು ಫಿಕ್ಸ್‌ ಆಗುವಷ್ಟರಲ್ಲಿ ಕಿಚ್ಚ ಸುದೀಪ್‌ ಅವರು ಮತ್ತೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ. 

ಹೌದು, ಕಿಚ್ಚಾ ಸುದೀಪ್‌ ಅವರು ಈ ಪ್ರೋಮೋದಲ್ಲಿ ಸ್ವರ್ಗ ಹಾಗೂ ನರಕದ ಕುರಿತು ಮಾತನಾಡುತ್ತಾ, ಇಂದು ರಾತ್ರಿ ನಡೆಯಲಿರುವ ರಾಜಾರಾಣಿ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಯ ಹಲವು ಸ್ಪರ್ಧಿಗಳ ಲಿಸ್ಟ್‌ ರಿವೀಲ್‌ ಆಗಲಿದೆ ಎಂದು ಪ್ರೋಮೋದಲ್ಲಿ ಹೇಳಿದ್ದಾರೆ. 

ಈ ಲಿಸ್ಟ್‌ಗೂ ಹಾಗೂ ಪ್ರೇಕ್ಷಕರಿಗೂ ಏನು ಸಂಬಂಧ ಇಲ್ಲ, ಆದರೆ ಈ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ ಅಥವಾ ನರಕಕ್ಕೆ ಹೋಗಬೇಕಾ ಎಂಬುದನ್ನು ಪ್ರೇಕ್ಷಕರು ತಮ್ಮ ವೋಟ್‌ನ ಮೂಲಕ ನಿರ್ಧರಿಸಲಿದ್ದಾರೆ. ಈ ಮೂಲಕ ಸ್ಪರ್ಧಿಗಳ ಹಣೆಬರಹವನ್ನು ಪ್ರೇಕ್ಷಕರು ನಿರ್ಧರಿಸಲಿದ್ದಾರೆ. 

ಹೀಗೆ ಎಂದಿನಂತೆಯೇ ಕಿಚ್ಚ ಸುದೀಪ್‌ ಅವರು ಇತ್ತೀಚೆಗೆ ರಿಲೀಸ್‌ ಆಗಿರುವ ಪ್ರೋಮೋದ ಮೂಲಕ ಪ್ರೇಕ್ಷಕರಿಗೆ ಟ್ವಿಸ್ಟ್‌ ಕೊಟ್ಟಿದ್ದಾರೆ. ಅಂತೂ ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಈ ಭಾರಿಯ ಬಿಗ್‌ ಬಾಸ್‌ ಸೀಸನ್‌ ಎಲ್ಲಾ ಸೀಸನ್‌ಗಳಿಗಿಂತಲೂ ವಿಭಿನ್ನವಾಗಿರುವುದು ಪಕ್ಕಾ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link