`ವಿಕ್ರಾಂತ್ ರೋಣ` ಟ್ರೈಲರ್ ಲಾಂಚ್‌ನಲ್ಲಿ ಕಿಚ್ಚ ತೊಟ್ಟಿದ್ದ ಜಾಕೆಟ್ ಬೆಲೆ ಎಷ್ಟು ಗೊತ್ತಾ?
ಕಿಚ್ಚ ಸುದೀಪ್ ಸಿನಿಮಾ ರಂಗದಲ್ಲಿ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ನಟನೆಯ ಜೊತೆಗೆ ಸ್ಟೈಲಿಶ್ ಲುಕ್‌ಗೆ ಸಹ ಆಗಾಗ ಸದ್ದು ಮಾಡುವ ನಟ, ಕಳೆದ ದಿನ ನಡೆದ ವಿಕ್ರಾಂತ್ ರೋಣಾ ಸಿನಿಮಾದ 3ಡಿ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ತೊಟ್ಟಿದ್ದ ಜಾಕೆಟ್‌ಗೆ ಇದೀಗ ಸಖತ್ ಸುದ್ದಿಯಾಗುತ್ತಿದೆ.
ಸಿಂಪಲ್ ಲುಕ್‌ನಲ್ಲಿಯೂ ಸಖತ್ ಆಗಿ ಮಿಂಚಿದ್ದ ಕಿಚ್ಚ, ಬರೋಬ್ಬರಿ 23 ಸಾವಿರ ರೂ ಬೆಲೆಯ ಪುಲ್ಲೋವರ್ ಜಾಕೆಟ್ ತೊಟ್ಟಿದ್ದರು. ಆನ್‌ಲೈನ್‌ನಲ್ಲಿ ಈ ಜಾಕೆಟ್ ಬೆಲೆ ಡಾಲರ್ ಮತ್ತು ಯುರೋಗಳಲ್ಲಿ ಇದ್ದು, ಭಾರತೀಯ ಮೌಲ್ಯ 23,047ರೂ. ಇದೆ.
ಕಪ್ಪು ಮತ್ತು ಬೂದು ಬಣ್ಣದ ಕಾಂಬಿನೇಶನ್ ಹೊಂದಿರುವ ಈ ಪುಲ್ಲೋವರ್ ಉದ್ದನೆಯ ತೋಳು ಜೊತೆಗೆ ಟೋಪಿ ಹೊಂದಿದೆ.
ಈ ಪುಲ್ಲೋವರ್ ಹೆಸರಾಂತ ಬ್ರ್ಯಾಂಡ್‌ನದ್ದಾಗಿದೆ. ಕಿಚ್ಚ ಹೆಚ್ಚಾಗಿ ಎಂಪಾರಿಯೋ ಅರ್ಮಾನಿ ಬ್ಯ್ರಾಂಡ್‌ನ ಬಟ್ಟೆಗಳನ್ನು ಇಷ್ಟಪಡುತ್ತಾರೆ.