Photo Gallery: ‘ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌ಗೆ ಮಹೂರ್ತ ಫಿಕ್ಸ್, ಫ್ಯಾನ್ಸ್ ಗಳಿಗೆ ಹೆಚ್ಚಿದ ಹಾರ್ಟ್ ಬೀಟ್

Fri, 17 Jun 2022-9:44 pm,

ಒಟ್ಟಾರೆ ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸೋದು ಗ್ಯಾರಂಟಿ. ಇದು ಬಾಲಿವುಡ್‌ ದೊರೆಗಳ ಎದೆಯಲ್ಲಿ ನಡುಕ ತರಿಸಿದ್ದು, ಸಾಲು ಸಾಲಾಗಿ ಸೌತ್‌ ಸಿನಿಮಾಗಳು ಹಿಟ್ ಆಗುತ್ತಿರುವುದು ಸಹಜವಾಗಿಯೇ ಬಾಲಿವುಡ್‌ ಸ್ಟಾರ್‌ಗಳ ನಿದ್ದೆ ಹಾರಿ ಹೋಗುವಂತೆ ಮಾಡಿದೆ. 'ವಿಕ್ರಾಂತ್‌ ರೋಣ' ಟೀಸರ್‌ ನೋಡಿದ್ದ ಫ್ಯಾನ್ಸ್‌ಗೆ ಇದೀಗ ಟ್ರೈಲರ್‌ ಮೂಲಕ ಯಾವ ಸರ್ಪ್ರೈಸ್‌ ಸಿಗುತ್ತೆ ಅನ್ನೋ ವಿಚಾರವನ್ನ ಕಾದು ನೋಡಬೇಕಿದೆ.

ಯಾಕಂದ್ರೆ ಇಷ್ಟು ದಿನಗಳ ಕಾಲ ವೀಡಿಯೋ ಗ್ಲಿಂಪ್ಸ್, ಟೀಸರ್‌ & ಸಾಂಗ್ಸ್ ಮಾತ್ರ ಕಣ್ತುಂಬಿಕೊಂಡಿದ್ದ ಕಿಚ್ಚ ಸುದೀಪ್‌ ಅಭಿಮಾನಿಗಳು, ಇದೀಗ ತಮ್ಮ ನೆಚ್ಚಿನ ನಟನ ಸಿನಿಮಾ ಟ್ರೈಲರ್‌ ನೋಡಬಹುದಾಗಿದೆ.  

ಅಂದಹಾಗೆ ‘ವಿಕ್ರಾಂತ್ ರೋಣ’ ಟ್ರೈಲರ್‌ ಬಿಡುಗಡೆಗೆ ಜೂನ್‌ 23ರ ಡೇಟ್‌ ಫಿಕ್ಸ್‌ ಆಗುತ್ತಿದ್ದಂತೆ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದೆ. 

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಅಧಿಕೃತವಾಗಿ ಈ ಕುರಿತು ಮಾಹಿತಿ ನೀಡಿರುವ ನಟ ಕಿಚ್ಚ ಸುದೀಪ್‌ ಅವರು, Once You Enter The Maze, Escape Is Not An Option ಅಂತಾ ಬರೆದುಕೊಂಡಿದ್ದಾರೆ.

ಆ ಕುತೂಹಲದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ‘ವಿಕ್ರಾಂತ್ ರೋಣ’  ಟ್ರೈಲರ್‌ ರಿಲೀಸ್‌ಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ.ಈ ಬಗ್ಗೆ ಸ್ವತಃ ನಟ ಕಿಚ್ಚ ಸುದೀಪ್‌ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.ಅಂದಹಾಗೆ ಜೂನ್‌ 23ರಂದು ‘ವಿಕ್ರಾಂತ್ ರೋಣ’ ಸಿನಿಮಾ ಟ್ರೈಲರ್‌ ರಿಲೀಸ್‌ ಮಾಡುವುದಾಗಿ ಸ್ವತಃ ಕಿಚ್ಚ ಸುದೀಪ್‌ ಅವರೇ ಘೋಷಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link