ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಬೆನ್ನಲ್ಲೇ ಕಿಚ್ಚ ಸುದೀಪ್ ಹೇಳಿಕೆ ವೈರಲ್!

Sun, 16 Jun 2024-2:30 pm,

ಸದ್ಯ ಕನ್ನಡ ಚಿತ್ರರಂಗ ವಿವಾದಗಳಿಂದ ತುಂಬಿ ತುಳುಕುತ್ತಿದೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ, ಯುವರಾಜ್ ಕುಮಾರ್‌ ಮತ್ತು ಶ್ರೀದೇವಿ ಡಿವೋರ್ಸ್‌ ಬೆನ್ನಲ್ಲೇ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.

ಈ ಎಲ್ಲಾ ವಿಚಾರಗಳ ಬೆನ್ನಲ್ಲೇ ಕಿಚ್ಚ ಸುದೀಪ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, “ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ, ಯಾವ ಥರ ರಾಜನಾಗಿ ಬಾಳಿದ್ದೀರಿ ಅನ್ನೋದು ಮುಖ್ಯ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಚಿತ್ರದುರ್ಗದ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ನಟ ದರ್ಶನ್‌, ಆಪ್ತೆ ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಈ ನಡುವೆಯೇ ಕಿಚ್ಚ ಸುದೀಪ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ ರಾಜನ ಕಥೆಯೂ ವೈರಲ್‌ ಆಗುತ್ತಿದೆ. ರಾಜ ಮತ್ತು ರಾಜ್ಯಭಾರದ ಬಗ್ಗೆ ಮಾತನಾಡಿದ್ದ ಕಿಚ್ಚನ ಆ ಮಾತುಗಳು ಪ್ರಸ್ತುತ ಬೆಳವಣಿಗೆಗೆ ಸರಿಯಾಗಿ ಹೊಂದುತ್ತಿದೆ.

"ಮುಂದೊಂದು ದಿನ ನಿಮ್ಮ ಹೆಸರು ಪುಸ್ತಕದ ಪುಟಗಳಲ್ಲಿ ಮುದ್ರಣ ಆಗಬೇಕು ಅಂದ್ರೆ, ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಆಗಲ್ಲ, ಯಾವ ಥರ ರಾಜನಾಗಿ ಬಾಳಿದ್ರಿ ಎಂಬುವುದು ಮುಖ್ಯವಾಗುತ್ತೆ” ಎಂದು ಸುದೀಪ್‌ ಹೇಳಿರುವ ಅರ್ಥಪೂರ್ಣ ಮಾತು ವೈರಲ್ ಆಗುತ್ತಿದೆ.

"ಇನ್ನೊಬ್ಬ ರಾಜನಿಗೆ ಗೌರವ ಕೊಡುವವನೇ ನಿಜವಾದ ರಾಜ. ಆ ಗೌರವ ಇಲ್ಲ ಅಂದ್ರೆ ನಾವು ಅಲ್ಯಾಕೆ ಇರಬೇಕು, ನಾವು ಸ್ನೇಹ ಪೂರ್ವಕವಾಗಿ ಕೈ ಚಾಚ್ತಿವಿ. ಅದಕ್ಕೆ ಸ್ಪಂದಿಸದಿದ್ದರೆ, ಹೊರಬರಬೇಕು ಅಷ್ಟೇ" ಎಂದಿದ್ದಾರೆ.‌

          View this post on Instagram                      

A post shared by Namma Sandalwood🔹 (@namma.sandalwood)

 

 

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link