ಇದು ತೆಲುಗು ಬಿಗ್‌ಬಾಸ್ ಅಲ್ಲ.. ಕನ್ನಡ ಶೋ.. ಮಾತಿನಲ್ಲಿ ಎಚ್ಚರ..! ಕಿಚ್ಚನ ವಾರ್ನಿಂಗ್‌ಗೆ ಶೋಭಾ ಶೆಟ್ಟಿ ಸೈಲೆಂಟ್
ಶೋಭಾ ಶೆಟ್ಟಿ ಧಾರಾವಾಹಿಗಳಲ್ಲಿ ಬಹುತೇಕ ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ.
ಶೋಭಾಶೆಟ್ಟಿ ತೆಲುಗಿನ ಕಾರ್ತಿಕದೀಪ ಧಾರಾವಾಹಿಯಲ್ಲಿ ಮೋನಿತಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.
ಕಾರ್ತಿಕದೀಪ ಧಾರಾವಾಹಿಯಿಂದ ಈ ಸುಂದರಿ ಎರಡು ತೆಲುಗು ರಾಜ್ಯಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾಳೆ.
ಈ ಧಾರಾವಾಹಿಯಿಂದ ಈ ಶೋಭಾ ಶೆಟ್ಟಿ ಕ್ರೇಜ್ ಭಾರೀ ಪ್ರಮಾಣದಲ್ಲಿ ಹೆಚ್ಚಾಯಿತು.
ತೆಲುಗು ಬಿಗ್ ಬಾಸ್‌ಗೂ ಎಂಟ್ರಿ ಕೊಟ್ಟಿದ್ದ ಶೋಭಾ ಇದೀಗ ಕನ್ನಡ ಬಿಗ್‌ಬಾಸ್‌ನಲ್ಲಿ ಅರ್ಭಟಿಸುತ್ತಿದ್ದಾರೆ.
ಈ ಪೈಕಿ ಇತ್ತೀಚಿಗೆ ಸುದೀಪ್ ಅವರು ಶೋಭಾ ಶೆಟ್ಟಿ ಎಚ್ಚರಿಸಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಾರದ ಕತೆ ಕಿಚ್ಚನ ಜೊತೆಯಲ್ಲಿ ಸಂಚಿಕೆಯಲ್ಲಿ ಕಿಚ್ಚ ಮಾತನಾಡುತ್ತಿರುವಾಗಲೇ ನಡುವೆ ಮಾತನಾಡಿದ ಶೋಭಾಗೆ.. ಇದು ತೆಲುಗು ಬಿಗ್ ಬಾಸ್ ಅಲ್ಲ.. ಕನ್ನಡ ಶೋ ಅಂತ ಎಚ್ಚರಿಕೆ ನೀಡಿದ್ದಾರೆ..
ನಿಮಗೆ ಪ್ರಶ್ನೆ ಕೇಳುತ್ತೇನೆ.. ಅದಕ್ಕೆ ನೀವೇ ಉತ್ತರಿಸಬೇಕು. ಇಲ್ಲಿ ನಾನು ಪ್ರಶ್ನೆಗಳನ್ನು ಕೇಳಬೇಕು ಮತ್ತು ನೀವು ಉತ್ತರಿಸಬೇಕು ಎಂದು ಸುದೀಪ್ ಹೇಳಿದರು.
ಸಧ್ಯ ಕಿಚ್ಚನ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲವು ತೆಲುಗು ಅಭಿಮಾನಿಗಳೂ ಸಹ ಸೂಪರ್ ಸುದೀಪ್ ಸರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಬಿಗ್ ಬಾಸ್ ಮನೆಯಲ್ಲಿರುವ ಶೋಭಾ ಶೆಟ್ಟಿ ತನ್ನದೇ ಸ್ಟೈಲ್‌ನಲ್ಲಿ ಸ್ಪರ್ಧಿಗಳ ಬೆವರಿಳಿಸುತ್ತಿದ್ದಾಳೆ.. ಆಗಾಗ ಜಗಳವನ್ನಾಡುವುದೂ ಉಂಟು..