ದರ್ಶನ್ ಮತ್ತು ಸುದೀಪ್ ಜೊತೆ ನಟಿಸಿದ್ದ ಈ ನಟಿಯ ನೆನಪಿದೆಯಾ..? ಸಿನಿರಂಗದಿಂದ ದೂರ... ಈಗ ಎಲ್ಲಿದ್ದಾರೆ ಗೊತ್ತೆ..?
ನಂದಿ ಮತ್ತು ಧರ್ಮ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿಂಧು ಮೆನನ್ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.
ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಸೌತ್‌ನ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಸಿಂಧು ಕರ್ನಾಟಕದವರು. 1994 ರಲ್ಲಿ ಅವರು ರಶ್ಮಿ ಎಂಬ ಕನ್ನಡ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು..
ಶ್ರೀಹರಿ ಅಭಿನಯದ ಭದ್ರಾಚಲಂ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಈ ಚೆಲುವೆ. ಮೊದಲ ಸಿನಿಮಾವೇ ಬಂಪರ್ ಹಿಟ್ ಆಗಿದ್ದರಿಂದ ಈ ಬೆಡಗಿಗೆ ತೆಲುಗಿನಲ್ಲಿ ಸಾಲು ಸಾಲು ಆಫರ್ ಗಳು ಬಂದವು.
ತ್ರಿನೇತ್ರಂ, ಶ್ರೀ ರಾಮ ಚಂದ್ರ, ಅದಾಂತೇ ಆಡೋ ಟೈಮ್‌ನಂತಹ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದರು, ಆದರೆ ಅವು ತೆಲುಗಿನಲ್ಲಿ ಸಿಂಧುಗೆ ಉತ್ತಮ ಖ್ಯಾತಿ ನೀಡಲಿಲ್ಲ..
ಸಿನಿಮಾ ಹಿಟ್ ಆಗದ ಕಾರಣ ಎರಡನೇ ನಾಯಕಿಯ ಪಾತ್ರ ಮಾಡಲು ಮುಂದಾದ ನಟಿಗೆ ಅವಕಾಶಗಳು ಸಿಗಲಿಲ್ಲ..
2012ರಲ್ಲಿ ಕೊನೆಯದಾಗಿ ಮಂಜಡಿಕ್ಕುರು ಎಂಬ ಮಲಯಾಳಂ ಸಿನಿಮಾದಲ್ಲಿ ಈ ಚೆಲುವೆ ಕಾಣಿಸಿಕೊಂಡಿದ್ದಳು.
ಆ ಬಳಿಕ ಮದುವೆಯಾದ ಅವರು ಸಿನಿಮಾದಿಂದ ದೂರ ಉಳಿದರು. ಸಿಂಧು ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ.
ಸಿಂಧು ಸಿನಿಮಾ ಮಾತ್ರವಲ್ಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.. ವಂಶಮ್ ಮತ್ತು ಕಾರ್ತಿಕಾ ಎಂಬ ಎರಡು ಮಲಯಾಳಂ ಧಾರಾವಾಹಿಗಳಲ್ಲಿ ಮುಖ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ.
ಸಧ್ಯ ಸಿಂಧು ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ. 2010 ರಲ್ಲಿ, ಡಾಮಿನಿಕ್ ಪ್ರಭು ಎಂಬ ಐಟಿ ವೃತ್ತಿಪರರನ್ನು ವಿವಾಹವಾದರು.
ಈ ಜೋಡಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾಳೆ. ಆಗಾಗ್ಗೆ ತಮ್ಮ ಕುಟುಂಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ..